ಮನವೆಂಬ ಹಾದರಗಿತ್ತಿ..

ಮನವೆಂಬ ಹಾದರಗಿತ್ತಿಯೇ
ನಿಲ್ಲಿಸು ನಿನ್ನ ಹೊಲಸು ಚಾಳಿ
ಭವ ಬಂಧನಗಳಲಿಯೂ ಸೊಕ್ಕಿ
ಹೋಗಿರುವೆ ನೀ ಯಾರ ಮಾತ ಕೇಳಿ..?!

ಕಂಡ ಕಂಡ ಆಸೆ ಗಂಡರಿಗೆ
ಏಕೆ ನೀ ಸೆರುಗು ಹಾಸತಿ
ನಾನು ನನ್ನದು ನನ್ನಿಂದ ಎನ್ನುವ
ಅಂಹಮಿನ ಜೊತೆಜೊತೆಗೆ ನಿನ್ನ ದೊಸತಿ..!

ಮೋಹ ಮಿಂಡರೊಡಗೂಡಿ
ಬಂಡೆದ್ದು ಹೋಗಿದ್ದು ಯಾಕೆ..?
ತನವು ಅಳಿದು ಕಳೆಯ ಕಳೆದು
ತಮವೂ ಹರಿದು ಮಣ್ಣ ಮೆಟ್ಟುವೆ ಜೋಕೆ..!

~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

19 Jan 2018, 09:56 am
Download App from Playstore: