ಕಾಶೀ ವಿಧಿವಶ..
ಯಾತ್ರೆ ಮುಗಿಯಿತು, ಕಾಶೀ ನಿನ್ನದು..
ನೆನಪು ಮಾತ್ರ ಹಾಗೆ ಉಳಿಯಿತು..
ಕಷ್ಟ ಪಟ್ಟು ಮೇಲೆ ಬಂದ ವ್ಯಕ್ತಿ ನೀನು..
ಏಕೆ, ಅರ್ಪಿಸಿದೆ ಚಿತ್ರರಂಗಕ್ಕೆ ನಿನ್ನನ್ನು..
ಇದು ಜೀವನವ ! ಜೀವನದ ಸತ್ಯವ ! ಸತ್ಯ ಘಟನೆ ಯ ಪ್ರತಿಬಿಂಬವ !
ಕಾಶೀ ನಿಮ್ಮ ವಿಧಿವಶ..
ಯಾರಿಗೆ ತಾನೇ ಸಂತೋಷ...
ಏಕೆ ಮೌನ ತಾಳಿದೆ, ಹೀಗೇಕೆ ಮೌನ ತಾಳಿದೆ..
ಆರೋಗ್ಯ ಸಮಸ್ಯೆಯನ್ನು ನೀವು ಯಾರಿಗೂ ತಿಳಿಸದೆ..
ನೀವೇಕೆ ಇಷ್ಟು ಬೇಗ ನಮ್ಮನ್ನ ಬಿಟ್ಟು ಇಹಲೋಕ ತ್ಯಜಿಸಿ ದೆ..
ಹೇ ಕಾಶೀನಾಥ..ನಿಜಕ್ಕೂ ನೀನೇ ಮನ್ಮಥ..
ನಟನೆಯಲ್ಲಿ ಹಾಸ್ಯ ತುಂಬಿ ನಟಿಸಿದ ಪರಿಣಿತ..
ಏಕೆ ಕಣ್ಮರೆಯಾದೆ ; ನೆನಪುಗಳನ್ನ ಮಾರ್ಗ ಮಧ್ಯೆ ಬಿಟ್ಟು ಹೋದೆ..
ಹುಟ್ಟಿ ಬಾ.. ಹುಟ್ಟಿ ಬಾ..
ಮತ್ತೊಮ್ಮೆ ಹುಟ್ಟಿ ಬಾ !
ಕರುನಾಡಲ್ಲಿ ಹುಟ್ಟಿ ಬಾ..ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸು ಬಾ!
ಕಳಚಿತು ಕಾಶೀ ಎಂಬ ದೊಡ್ಡ ಕಲೆಯ ಕೊಂಡಿ..
ಯಾರನ್ನೂ ಬಿಟ್ಟಿಲ್ಲ ಸಾವು ಎಂಬ ಬದುಕಿನ ಜಟಕಾ ಬಂಡಿ..
ಸಂತು..8197072636
- ಸಂತೋಷ್ ಹೆಚ್ ಆರ್
19 Jan 2018, 10:39 am
Download App from Playstore: