ಕರುನಾಡು ನನ್ನ ಉಸಿರ ಗೂಡು

ಕರುನಾಡಿನ ಕಣ್ಮಣಿಗಳೇ
ನಾಡದೇವಿಯ ಒಡಲ ಕುಡಿಗಳೇ
ಹಾಡಿ ಐಕ್ಯತೆಯ ಹಾಡ
ಐಕ್ಯತೆಯಲಿ ಬಲವಿದೆ ನೋಡ

ಯಾವ ಭಾಷೆಯು ಬಂದರು
ನಾಡ ನುಡಿಯು ನಲುಗದು
ಯಾರೇ ಕತ್ತಿ ಮಸೆದರು
ನಾಡ ಪ್ರೇಮ ಬಗ್ಗದು

ಎಲ್ಲಿ ನೋಡಿದರಲ್ಲಿ ಚೆಲುವು
ಕೈಬೀಸಿ ಕರೆಯುವ ಒಡನಾಡಿಗಳ ಸ್ನೇಹವೂ
ಜಾತಿ ಧಮ೯ವ ಸುಟ್ಟು ಬಂದಿಹ
ನಾಡ ಪ್ರೇಮದ ಕುಸುಮವು
ಹಿರಿಯ ಕಿರಿಯರೆನ್ನದೆ
ಪ್ರೀತಿ ತೋರುವ ತಾಯ್ ನೆಲವು

ನನ್ನ ನಾಡು ಕರುಣೆಯ ಬೀಡು
ನಾಡಿನ ತುಂಬಾ ಒಲವಿದೆ ನೋಡು
ಕನ್ನಡ ನುಡಿಯ ಸವಿಯನು ಉಂಡು
ತಾಯ್ನಾಡಿನಲ್ಲಿ ಹರಿಯುವ ನದಿಗಳ ಸಂಭ್ರಮ ಕಂಡು
ನೀನು ಅಚ್ಚರಿ ಪಡುವೆ ಏನು
ಕನ್ನಡವದುವೇ ಸವಿಜೇನು

ಹಚ್ಚ ಹಸಿರಿನ ವನರಾಶಿ
ನಡುವೆ ಕುಳಿತರೆ ಪರಿಮಳ ಸೂಸಿ
ಪರಿಶುದ್ದ ಗಾಳಿಯು ಬರುವುದು
ನಿನ್ನನ್ನೆ ಹರಸಿ
ಹೇಳುತಾ ಎಂದೂ ಕನ್ನಡ ಬಳಸಿ
ಎಂದೂ ಕನ್ನಡ ಉಳಿಸಿ

- Bhagya Girish

19 Jan 2018, 12:09 pm
Download App from Playstore: