ಪತ್ರಕತ೯ರ ಲೇಖನಿ
ಪತ್ರಕತ೯ರ ಲೇಖನಿಯದು
ಖಡ್ಗಕ್ಕಿಂತಲೂ ಬಲೂ ಚೂಪು
ಪ್ರತಿಯೊಂದು ಪದಗಳಲೂ ಮೂಡಿಸುವುದದು ಸಮಾಜೀಕ
ಕಳಕಳಿಯ ಚಾಪೂ..
ಲೇಖನಿಯಲ್ಲಡಗಿಹುದು ಅಗೋಚರ ಶಕ್ತಿ
ಬರವಣಿಗೆಯ ಶೈಲಿಯಲ್ಲಡಗಿದೆ ಅದರ ಯುಕ್ತಿ
ಕೊಡಿಸುವುದದು ಎಲ್ಲಾ ಜನಗಳಿಗೆ ದಬ್ಬಾಳಿಕೆಯಿಂದ ಮುಕ್ತಿ
ಲೇಖನಿ ಮೂಡಿಸುವುದು ಜನ ಮಾನಸದಲಿ
ದೇಶ ಭಕ್ತಿ
ಸತ್ಯದಿಂದ ಆಸತ್ಯವ ಕೊಂದು
ಧಮ೯ದಿಂದ ಅಧಮ೯ವ ಕೊಂದು
ಸಂಸ್ಕೃತಿಯಿಂದ ಸಾಹಿತ್ಯ ತಂದು
ದೇಶದ ಜನ ಮನಗಳ ನ್ಯಾಯ ಕಾಯುವ ಲೇಖನಿಯದು
ದೇಶ ಕಾಯುವ ವೀರ ಸೈನಿಕನಂತೆ
ಪತ್ರಕತ೯ರ ಲೇಖನಿಯದು
ಯಾವ ಆಸೆ ಆಮಿಷಗಳಿಗೂ ಲೇಖನಿಯ ತಲೆ ಕೊಡದಿರಿ
ಅದನ್ನು ಯಾರ ಯಾವುದರ ಗುಲಾಮರನ್ನಾಗಿಯೂ ಮಾಡದಿರಿ
ಸತ್ಯವ ಎತ್ತಿ ಹಿಡಿಯುವ ಸತ್ವಯುತ
ಖಡ್ಗವೆಂದೆ ಭಾವಿಸಿರಿ
ಅದು ದೇಶದ ಐದನೇ ಆಧಾರ ಸ್ತಂಭವೆಂಬುದ ಮರೆಯದಿರಿ
- Bhagya Girish
19 Jan 2018, 12:53 pm
Download App from Playstore: