ಗಂಗವ್ವ ತಾಯೇ
ನನ್ನವ್ವ ಮಾಯೇ
ಸಿಟ್ಟ್ಯಾಕೆ ಸಿಡುಕ್ಯಾಕೆ ಗಂಗವ್ವ
ಇದು ತರವಲ್ಲ ನಿನಗೆ ಹಡೆದವ್ವ
ನೀ ಸಿಟ್ಟಾದಗೆಲ್ಲಾ ಹೊಟ್ಟೆಗೆ ಹಿಟ್ಟಿಲ್ಲ
ಕರುಣೆಯ ತೋರಿ ಹರಸವ್ವ
ಈ ಮಕ್ಕಳ ರಕ್ಷಿಸು ಜಗದವ್ವ
ಒಣ ಒಣ ಒಣ ಮುನಿಸುಬ್ಯಾಡ
ಧಡ ಧಡನೇ ಸುರಿಯ ಬ್ಯಾಡ
ಗಂಗವ್ವ ಜಲಪ್ರಳಯ ಮಾಡಿಕೊಂಡು
ತವರಿಗೆ ಮರಳಬ್ಯಾಡ
ಹೇ ಮಾಯೇ ಬರಗಾಲ ತಂದುಕೊಟ್ಟು
ತವರ ಬಿಟ್ಟು ಹೋಗಬ್ಯಾಡ
ಕಾಲ ಕಾಲಕೆ ನೀ ಬಾರೇ
ಈ ತವರಿಗೆ ಸಿರಿಯ ನೀ ತಾರೇ
ಪ್ರೀತಿಯ ಸಂಭಂಧ ಬೆಸೆಯುವ ನೀರೇ
ಜಗಕ್ಕೆಲ್ಲಾ ಬೇಕಿದೆ ನಿನ್ನುಸಿರ ಹಸಿರೇ
ಈ ಧರಣೆಯ ತಣಿಸುವ ನಿನ್ನಾಸರೇ...
- Bhagya Girish
19 Jan 2018, 01:10 pm
Download App from Playstore: