ಇದು ನಮ್ಮ ಸಮಾಜ........

ಗೊತ್ತಿಲ್ಲ ಗುರಿ ಇಲ್ಲ ಯಾರಗೆ ಯಾರು ತಿಳಿದಿಲ್ಲ
ಯಾರೋ ಪದವಿ ಎರಲು ಇನ್ಯಾರೊ ಬಲಿಪೀಟವಂತೆ ಅದರ ಮೇಲೆ ಅವರ
ಬದುಕಿನ ಬಣ್ಣದ ಚಿತ್ತಾರವಂತೆ ನಾವು ನೋಡಿ
ಕಣ್ಣ ತುಂಬಿಸಿಕೋಳ್ಳಬೆಕಂತೆ ಹೋಟ್ಟೆ ಹಸಿದಿದ್ದರು ಜುಟ್ಟಿಗೆ ಮಲ್ಲಿಗೆ ಹೂವೋಂದು ಬೇಕಂತೆ.....

ಬನ್ರಪ್ಪೋ ಬನ್ರಿ ಕೆಳ್ರಪ್ಪೋ ಕೇಳ್ರಿ
ನಮಗೆನು ತಿಳಿದಿಲ್ಲ ತಿಳಿದೋರೆಲ್ಲ ಮಣ್ಣಲ್ಲಿ
ಮಣ್ಣಾಗಿ ಕಣ್ಮುಚ್ಚಿ ಮಲಗ್ಯಾರಲ್ಲ
ಮನುಷ್ಯ ಮನುಷ್ಯನನ್ನೆ ತುಳಿದು ಮೆಟ್ಟಿಲೆರಬೆಕಂತೆ ಇಲ್ಲದಿದ್ದರೇ ಬದುಕ ಇಲವಂತೆ
ಕಣ್ಮಂದೆ ಆನ್ಯಾಯವೆ ನಡೆಯುತ್ತಿದ್ದರು ನ್ಯಾಯ ಕೇಳುವವರು ಯಾರಿಲ್ಲ ಕಣ್ಮಚ್ಚಿ ಅಂದರಂತೆ ನಿಲ್ಲುವರಲ್ಲ.......

ಕೆಳಿರೋ ಎಲ್ಲ ನೋಡಿರೋ ಎಲ್ಲ ಈ ಜಗವ ನೋಡಿರೋ ಎಲ್ಲರ ಬದುಕ ನೋಡಿರೊ ಆದರೋಳಗೆ ನಮ್ಮನೆ ನಾವೆ ನೋಡಿಕೋಳ್ಳಿರೋ
ನಮಗಾಗೀ ನಾವೆ ಕಟ್ಟಿಕೋಂಡ ಲೋಕದೋಳಗೆ
ನಾವೆ ಪರರಂತೆ ಬದುಕ ಬೇಕಲ್ಲೋ ಸುಂದರವಾದ ಲೋಕದೋಳಗೆ ಕಪ್ಪಾದ ಚಾಯೆಯೋಂದು ಬಂದು ಆವರಿಸಿದಂತೆ ಈ ಸಮಾಜ.......

ಕಟ್ಟುಪಾಡುಗಳ ನಡುವೆ ನಾವು ಬದುಕಬೆಕಲ್ಲ
ಇಲ್ಲಿಯಾರು ನಮ್ಮವರಲ್ಲ ನಮ್ಮನ್ನೆ ನಾವು ನೋಡಿಕೋಂಡೂ ಬದುಕಬೆಕಿದೆ ಇಲ್ಲೀ
ಹುಟ್ಟೂವಾಗ ಯಾರಿಲ್ಲ ಹೋಗುವಾಗ ಯಾರಿಲ್ಲ ನಡುವೆ ಎಕೆ ಈ ಕಟ್ಟುಪಾಡುಗಳ ಸಮಾಜದೋಳಗೆ ನಾವು ನಮ್ಮತನವ ಕಳೆದು
ಬದುಕಬೆಂಕಂತೆ.........

ತನ್ನದೆ ಆದ ಸಂಸಾರ ಸುಖವಾಗಿ ಬದುಕಲು
ಸಮಾಜಕ್ಕೆ ಕೋಡಬೇಕಂತೆ ಸಂಪ್ರದಾಯಗಳ
ಬಳುವಳಿ ಇಲ್ಲದಿದ್ದರೆ ನಾವೆ ಮಾಡಿದ ಸಮಾಜ ನಮ್ಮನೆ ಹೋರಹಾಕುಂತಂತೆ.......

ನಾವು ಕಟ್ಟಿಕೋಂಡ ಸಮಜಕ್ಕೆ ನಮ್ಮನೆ ಆಳುವ ದೊರೆಬೇಕಂತೆ ಅವರ ಆಯ್ಕೆಯು ನಮ್ಮದೆ ಆದರು ನಮಗಿಲ್ಲಿ ಬೆಲೆ ಇಲ್ಲವಂತೆ
ಲಂಚ ಬ್ರಷ್ಠಾಚಾರ ದುರಾಸೆ ಹಣದಾಹ ಮೋಹ ಈ ಎಲ್ಲಭೂತಗಳ ತುಂಬಿರುವ ಸಮಾಜ....

ಕಂದನೋಬ್ಬ ಹುಟ್ಟಿ ಬೆಳೆದು ತನ್ನಂತೆ ತಾನು ಆಗಲು ಸಮಾಜದ ಎಲ್ಲರ ನಡುವೆ ಬದುಕಲು ಅವರಿಷ್ಟದಂತೆ ಬದುಕಬೇಕಂತೆ
ವಿದವೆಯೋಬ್ಬಳು ಮರುಮದುವೆಯಾದರೆ ಅವಮಾನವಂತೆ ಅದೆ ಗಂಡೊಬ್ಬನು ಮರು ಮದುವೆಯಾದರೆ ರಾಜನಂತೆ
ಹೆಣ್ಣೋಬ್ಬಳು ಗಂಡನನ್ನು ತೊರೇದರೆ ಅವಳಿಗೆ ಬದುಕುವ ಅರ್ಹತೆಯೆ ಇಲವಂತೆ ಹೆಣ್ಣೋಬ್ಬಳು ಒಂಟಿಯಾಗಿ ತನ್ನಂತೆ ತಾನು ಬದುಕಲು ಬಿಡದ ಸಮಾಜ .......

ಕಷ್ಟಪಟ್ಟು ಬೆವರು ಸುರಿಸಿ ಬೆಳೆಯ ಬೆಳೆದು ಎಲ್ಲರಿಗು ಅನ್ನ ಹಾಕುವ ರೈತನೋಬ್ಬ ಬಡವನಂತೆ
ಎಲ್ಲೋ ಮೊಸದಿಂದ ಸಂಪಾದಿಸಿ ಸುಮ್ಮನೆ ಕೂತು ತಿಂದು ತೇಗಿ ಬಿಕ್ಷುಕನಿಗೆ ಅನ್ನಹಾಕದ ಅಲ್ಪನೋಬ್ಬ ಶ್ರೀಮಂತನಂತೆ.......

ಇದು ನಮ್ಮ ಸಮಾಜ ನಮಗೆ ನಾವೆ ಹಾಕಿ ಕೋಂಡ ಕಬ್ಬಿಣದ ಸರಪಳಿಗಳ ಬೇಲಿ ಎಂದೆದಿಗು ಕಿತ್ತೂ ಬಿಡಿಸಿಕೋಳ್ಳಲಾಗದೆ ಕುಂತಲ್ಲೇ ಕೊರಗಿ ಮರಗಿ ಅಸ್ತಿಪಂಜರವಾಗುವ ವರೆಗೆ ನಮ್ಮನ್ನೂ ಬಿಟ್ಟೋಗದ ನಮ್ಮದೆ ಆದ ಸುಂದರವಾದ ಸಮಾಜ...........ಎಷ್ಟು ಚಂದದ ಸಮಾಜ

- ರಾಗಸಿರಿ....

19 Jan 2018, 05:32 pm
Download App from Playstore: