ಅವಳದೇ ನೆನಪು...
ತೇಲುತ್ತಿರುವೆನು ನಾನು
ನನ್ನ ಗೆಳತಿಯ ನೆನಪಿನಲ್ಲಿ
ಕಾಡುತ್ತಿರುವಳು ಅವಳು
ನನ್ನ ನಿದ್ದೆಯ ಸಿಹಿಕನಸಿನಲ್ಲಿ!
ಹೃದಯದ ತುಂಬೆಲ್ಲ ಆವರಿಸಿ
ಕಾರಣವೇ ಇಲ್ಲದೆ ಹುಚ್ಚು ಹಿಡಿಸುತ್ತಾಳೆ
ಮೌನದಲೇ ಎಲ್ಲವ ಉತ್ತರಸಿ
ಮಾತೊಂದನೂ ನೀಡದೆ ಪ್ರಶ್ನೆಯಾಗಿದ್ದಾಳೆ!
ಹುಚ್ಚುಹುಡುಗ ನಾನು, ಅವಳ ಪ್ರೀತಿಯಲ್ಲಿ
ಕಣ್ಣೆದುರು ನಿಲ್ಲದೆ, ಕಾಡಿಸುತ್ತಾಳೆ ನಿರಾಶೆಯಲ್ಲಿ
ಸುಂದರ ಬದುಕು ಕಾದಿದೆ ನಿನಗಿಲ್ಲಿ
ನೀ ಬಂದು ಸೇರಲಾರೆಯ ನನ್ನ ತೋಳಿನಲ್ಲಿ!
- ಪ್ರಿಯಾಂಕ
25 Jan 2018, 04:44 pm
Download App from Playstore: