ರೈತ ರೈತ ರೈತ

ರೈತ ರೈತ ರೈತ
ಅನ್ನ ನೀಡುವ ಭಗವಂತ
ರೈತ ರೈತ ರೈತ
ಬಾಳು ಬೆಳಗುವ ಭಾಗ್ಯದಾತ
ರೈತ ರೈತ ರೈತ
ಪ್ರೀತಿ ಹಂಚುವ ಸ್ನೇಹಿತ "ಪ"

ಮಳೆರಾಯ ಜಿಗಿದು ಬಂದರೆ
ಹರುಷದಲಿ ಹಾಡುತ ಕುಣಿಯುವನು..
ನೇಗಿಲ ಹಿಡಿದು ನಿಂತರೆ
ಹೊಲದಲಿ ಹೊನ್ನಿನ ಬಿತ್ತನೆ ಮಾಡುವನು..
ಭೂತಾಯಿಯ ಮೊಗವ ಕಂಡರೆ
ನಿತ್ಯವೂ ಮುತ್ತಿನ ವಂದನೆ ಮಾಡುವನು..
ಬಾನೇತ್ತರ ಕುಣಿದು ಬಾಳಿನ ತೆನೆ ಬೆಳಗಿದರೆ
ಮನಸಲಿ ನಗುವಿನ ಸೋನೆ ಸರಿಸುವನು..

ಪ್ರತಿಫಲ ಏನೇ ಬಂದರೂ
ನಗುತ ಬದುಕಿನ ಬಂಡಿ ನಡೆಸುವನಿವನು..
ದುಡಿಮೆಯೇ ನಿಜ ದೇವರು
ಎಂಬ ಜೀವನ ನುಡಿ ಸಾರುವನಿವನು..
ಏನಾಗಲಿ ಎಲ್ಲರಿಗಾಗಿ ಬೆವರು
ಸುರಿಸಿ ದುಡಿದು ಹಸಿವ ನೀಗುವನಿವನು..
ಎಂದೂ ಸುಖವಾಗಿರಲಿ ಸರ್ವಜನರು
ಎಂದು ಶಕ್ತಿ ತುಂಬುವ ಮಹಾಸಂತನಿವನು..
ಈ ರೈತ ರೈತ ರೈತ

- ಸುರೇಶ್ ಟಿ ವಿ

26 Jan 2018, 04:15 pm
Download App from Playstore: