ನನ್ನವಳ ರೂಪ..
ಶಿವ್ನೆ ಅಂತ ದೇವರ ಗುಡಿಗೆ
ಕೈ ಮುಕ್ಕೊಂಡು ಹೋದೆ..!
ಕಣ್ಮಚ್ಕೊಂಡು ಧ್ಯಾನಕ್ಕುಂತ್ರು
ದೇವ್ರ ಬದ್ಲು ಅವಳ್ನೇ ನೋಡ್ದೆ..!
ತಪ್ಪಾಯ್ತಂತ ದೇವ್ರ ಮುಂದೆ
ಹಚ್ಚಿದೆ ತುಪ್ಪದ ದೀಪ..!
ಬೆಳಗೋ ದೀಪದ ಒಳಗೂ
ಕಾಣ್ತು, ನನ್ನ ಚಿನ್ನಿಯ ರೂಪ..!
~ ಸಿದ್ದು ಗುಂಡ
- - ಸಿದ್ದು ಕನ್ನಡಿಗ
28 Jan 2018, 05:49 pm
Download App from Playstore: