ನನ್ನವಳೆಂದರೆ..

ನನ್ನವಳು ನಾ ಬರುವ
ದಾರಿ ಕಾಯುತ್ತಾಳೆ
ನನಗಾಗಿ ನೆನಪುಗಳ
ಗಿಡವ ನೆಟ್ಟಿದ್ದಾಳೆ..!

ಜೀವನದ ಹಾದಿಯನು
ನಾ ಸವೆಸುತಿರುವಾಗ
ಭಯ ಮುಜುಗರ ತುಂಬಿದ ಮನಕೆ
ಸ್ಪೂರ್ತಿ ನೀಡುವ ತಂದೆಯಾಗಿದ್ದಾಳೆ..!

ಸುಖ ದುಃಖ ಎರಡರಲ್ಲೂ
ಬೆನ್ನ ಹಿಂದೆ ಇರುವಂತ
ಕಣ್ಣಾಲಿಗೆ ಸ್ಪಂದಿಸುವ
ಪ್ರೀತಿಯ ಸಹೋದರಿಯಾಗಿದ್ದಾಳೆ..!

ಪರಿತಪಿಸಿ ಹಂಬಲಿಸಿ
ಸೋತಂತೆ ಮನಕೆ
ಚಂದಮಾಮನ ತೋರಿಸಿ
ಕೈ ತುತ್ತು ತಿನಿಸಿ,
ಹಣೆಯ ಮೇಲೊಂದು ಮುತ್ತ ನೀಡಿ
ಸಂತೈಸುವ ತಾಯಿಯಾಗಿದ್ದಾಳೆ..!

ಅದೆಲ್ಲಕ್ಕಿಂತ,
ನಾ ಬರೆವ ಕವಿತೆಗಳಿಗೆ
ಜೀವ ಸೆಲೆಯಾಗಿದ್ದಾಳೆ
ಮುನ್ನುಡಿಯಾಗಿದ್ದಾಳೆ
ನನ್ನ ಕವನದ ಸಾಲುಗಳೊತ್ತು ನಿಂತಿದ್ದಾಳೆ..!

ನನ್ನವಳು ನಾ ಬರುವ
ಹಾದಿ ನೋಡುತ್ತಾಳೆ
ನನಗಾಗಿ ತನ್ನಯ
ಪ್ರೀತಿಯನ್ನೇ ನೀಡಿದ್ದಾಳೆ..!
~ ಸಿದ್ದು ಗುಂಡ

- - ಸಿದ್ದು ಕನ್ನಡಿಗ

28 Jan 2018, 05:51 pm
Download App from Playstore: