ಭಾರತ ನಾರಿ
ಆಡುವ ಹುಡಿಗಿಗೆ,ಮಾಡುವ ಮದುವೆಗೆ
ಓದುವ ವಯಸ್ಸಲ್ಲಿ ದುಡಿಯುವ ದುಡಿಮೆಗೆ
ಎಲ್ಲಿದೆ ಅಥ೯ ಹೆಣ್ಣಿನ ಬಾಳಿಗೆ
ನೂಕದಿರಿ ಹಿರಿಯರೇ ಅವಳ
ಸಾವಿನ ದವಡೆಗೆ
ಮದುವೆಯ ವಯಸ್ಸು ಅವಳದು ಅಲ್ಲ
ಹೆರುವ ದೇಹ ಅವಳಿಗಿನ್ನೂ ಇಲ್ಲಾ
ಕಾನೂನಿನ ಪಾಲನೆ ನಮಗಿದೆಯಲ್ಲಾ
ಯೋಚಿಸಿ ನಿದ೯ರಿಸಿ ಬಂಧುಗಳೆ ಮೆಲ್ಲಾ
ಅದಕ್ಕಿನ್ನೂ ಉಳಿದಿದೆ ಸಮಯವು ಎಲ್ಲಾ
ಶಾಲೆಗೆ ಹೋಗಲಿ ಈ ನಮ್ಮ ಕಿಶೋರಿ
ಆಗಲಿ ಮೋದಲು ಸಾಕ್ಷರ ನಾರಿ
ಧೈಯ೯ ಶೌಯ೯ಕೆ ಸಧೃಡತೆಯ ಮಾದರಿ
ದೇಶದ ಭವಿಷ್ಯದ ಹಿರಿಮೆಯ ಗರಿ
ಇವಳು ಭಾರತ ಮಾತೆಯ ಹೆಮ್ಮೆಯ ಕುವರಿ
ನಮ್ಮ ಭಾರತ ನಾರಿ
- Bhagya Girish
30 Jan 2018, 12:45 pm
Download App from Playstore: