ಮುದ್ದು ಗುಲಾಬಿ......
ಕಿತ್ತು ತಿನ್ನುವ ಹುಳುಗಳ
ನಡುವೆ ನೀ ಹೇಗೆ ಹುಟ್ಟಿ
ಬೆಳೆಯುವೆ ಮುದ್ದು ಗುಲಾಬಿಯೆ
ಅದಕೆಂದೆ ಮುಳ್ಳಿನ ಹೋದಿಕೆಯ
ಜೊತೆಗೆ ಹುಟ್ಟಿ ಬರುವೆಯೆನೆ
ಆದರು ನಿನ್ನಂದಕ್ಕೆ ಸರಿ ಸಾಟಿ ಯಾರೆ
ಮುದ್ದು ಗುಲಾಬಿಯೆ
ನಾನಾಗಬಾರದಿತ್ತೆ ನಿನ್ನಂತೆ ಒಂದು
ಮಾತಾಡದ ಗುಲಾಬಿಯಂತೆ
ಯಲ್ಲವ ನೋಡಿ ಮೌನವಾಗಿಯೆ
ಅರಳಿ ಮುಡಿದವರ ಮುಡಿ ಎರಿ
ಅವರಂದ ಹೆಚ್ಚಿಸೋಕೆ
ಗುಡಿಯೋಳಗೆ ಕಲ್ಲಂತೆ
ಕೂತಿರುವ ದೆವರ ಮುದ್ದಿಸಿ
ಯಲ್ಲರ ಮನಸ ಕದ್ದು
ಮೌನವಾಗಿಯೆ ನಿನಂತೆ
ಮರೆಯಾಗೋಕೆ............
- ರಾಗಸಿರಿ....
01 Feb 2018, 08:35 pm
Download App from Playstore: