ಕನಸ ಕುವರಿ
ತುಟಿ ಅಂಚಿನ ನಗುವಲ್ಲಿ
ಮಕರಂದದ ಜನನ.
ಕೆನೆಹಾಲಿನ ಕೆನ್ನೆಯಲಿ
ಬೆಳ್ಮುಗಿಲಿನ ಪಯಣ.
ತಿಳಿ ಗೋಡೆಯ ಹೃದಯಕ್ಕೆ
ತಂಪೆರುಚುವ ನಯನ.
ಬೆರಳಂಚಲೀ ಬೆರಗುತ್ತಿವೆ
ಬರೆದಂತಹ ಕವನ.....
ಉಸಿರಾಡುವ ಗೊಂಬೆಗೆ ಶೃಂಗಾರದ ಸೀರೆ
ಕೊರಳಪ್ಪಿ ಮುತ್ತಿಟ್ಟಿದೆ ಬಂಗಾರದ ತಾರೆ.
ಹೂ ರಾಶಿಗೂ ಬೇಕಂತೆ ಮುಡಿಯಲ್ಲಿ ಜಾಗ
ಮಲೆನಾಡು ಕಳಿಯುತ್ತಿದೆ ಈಗೀಗ ರಾಗ...
ಕೋಗಿಲೆಯು ತಲೆದೂಗಿದೆ ನೀನಾಡುವ ಸ್ವರಕೆ
ಮರೆತಂತ್ತಿದೆ ನವಿಲೆಲ್ಲ ಕುಣಿದಾಡುವ ಬಯಕೆ.
ಅಲೆ ಎಬ್ಬಿಸೋ ಕಡಲೆಲ್ಲ ಅಲೆದಾಡಿದೆ ನರಳಿ
ಹಸಿರೆಲೆಗಳು ಬಿಡುತ್ತಿಲ್ಲ ರವಿಕಿರಣದ ಚಹಳಿ....
::::: ಕೆ.ಜೆ.ಎಸ್.ಗೌಡ್ರು.ಹುಣಸೂರು..
- shasi kumar
01 Feb 2018, 09:07 pm
Download App from Playstore: