ಕನಸ ಕುವರಿ 2

ಕಣ್ಣುಬ್ಬಿನ ಸನ್ನೆಗೆ
ಎದೆ ಗೂಡಲಿ ಕದನ
ತುಟಿ ಸ್ಪರ್ಶದ ಮಾತಿಗೆ
ಮುಲುಗುಟ್ಟಿದೆ ಮಿಲನ....
ತಿಳಿ ಮುಗಿಲ ಮೇಲೆಲ್ಲಾ
ತಂಗಾಳಿಯ ವರಸೆ
ಬಿಳಿ ಬಣ್ಣ ನಾಚಿಸಿದೇ
ಕಣ್ಣಂಚಿನ ವರಸೆ...
ಕಸ್ತೂರಿಯ ಬಾವುಟವೂ
ನೆರಳಾಗಿ ಕಾದಿವುದು
ಚಿಟ ಪಟ ಮಳೆಹನಿಯ
ಕೊರಳಲ್ಲಿ ಮುತ್ತಾಗಿವುದು....
ಕೈ ಹಸ್ತದಿ ಹುಟ್ಟಿವುದು
ಗಿರಿ ಶೃಂಗದ ಸಿರಿಮೆ
ಮುಂಗುರುಳಿಗೆ ಸೋತೋಯ್ತು
ಕಾರಂಜಿಯ ಚಿಲುಮೆ....
::::: ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

02 Feb 2018, 06:31 am
Download App from Playstore: