ಗ್ರಹಣ

ಕವಿದಿರುವ ಕಪ್ಪು ಅಂಗಳಲಿ
ತಾರೆಗಳ ಶ್ವೇತ ರಂಗೋಲಿ
ಕೆಂಪಾದ ಬೋಗುಣಿಯಾಗಿ
ಓಲಾಡಿದ ನಿರಾಧಾರವಾಗಿ
ಶಶಿಯು,ರವಿ-ಧರೆಯ ಜೊತೆಯಾಗಿ

ಅಪರೂಪದಲ್ಲಿ ಅಪರೂಪವಾಗಿ
ಮೂಡಿದೆ ನೀ ಬಾನಂಗಳಲ್ಲಿ ಚಿತ್ತಾರವಾಗಿ
ಆ ಅಂದವ ಕಾಣದೆ ಅವಿತು ಕುಳಿತೆವು
ಅಂಧರಾಗಿ ,ಮೌಢ್ಯಕೆ ವಶವಾಗಿ

ಸ್ತಬ್ದವಾಯಿತು ನಗರದ ಬೀದಿಗಳು
ನಿನಗಿಡಿದ ಗ್ರಹಣ ಬಿಡುವವರೆಗು
ಎಲ್ಲೆಲ್ಲು ಒಳಿತು- ಕೆಡುಕುಗಳ ಹಾವಳಿ
ನಮ್ಮ ಹಾರವರಿಗೆ ನಿನಾದೆ ಬಳುವಳಿ



ಶಾರಧ

- ಶಕುಂತಲಾ

02 Feb 2018, 03:36 pm
Download App from Playstore: