ಲೋಕದ ಮ್ಯಾಗಲ ಪಾಪಿ ದೇವರ.....
ಲೋಕದ ಮ್ಯಾಗಲ ಪಾಪಿಯ ದೇವರು
ಜಾತಿಯಮ್ಯಾಲ ಹರಿಸ್ಯಾನು ರಕ್ತವ
ಪಾಪಿ ಮನುಜರು ಕಟುಕರ ಮನ ತಾಳಿ
ಜಾತಿಗಾಗಿ ಜೀವವ ಬಿಟ್ಟಾರು
ಸ್ವಚ್ಛಂದ ಜಗಕೆಲ್ಲ ಜಾತಿಯ ಕಳಂಕ ಹಚ್ಯಾರು ಬುದ್ದಿ ಹೆಚ್ಚಾದವರು......
ಹಿಂದು ಮುಸ್ಲಿಂ ಸಿಖ್ ಸಾಯಿ ಕ್ರೈಸ್ತನೆಂಬ ದೇಹದೋಳಗ
ಜಾತಿಯ ಮಠ ಕಟ್ಟಿ ಉಳಿದವರ ಬಾಳಿಗೆ ಬೆಂಕಿ ಹಚ್ಚಿ
ಕೆಂಪಾನ ರಕ್ತ ಭಾನೆತರಕ ಚೆಲ್ಲಿ
ಕೇಕೆ ಹಾಕುತ್ತಾ ಮನುಜ ನಗತಾನ
ಮನದೊಳಗೇ ಶಾಂತಿಲ್ಲ ಮಸಣದಲಿ ಜಾಗವಿಲ್ಲ
ಹಾದಿಯ ಹೆಣವಾಗಿ ಜಾತಿಯ ಕಿಚ್ಚಯೆರಚಿ..
ಹುಟ್ಟುವಾಗ ನೀ ಅಳುತಲೆ ಹುಟ್ಟೆದೆ
ಸತ್ತಾಗ ಬೆರೆಯವರನ್ನ ಅಳಿಸಿದೆ
ಜಾತಿ ಮತವೆಂಬ ಬಿಜವ ನೀ ಬಿತ್ತಿ ಸತ್ತು ನಿ ಉಳಿದೇ
ಆ ದೇವರ ಬಳಿ ನೀ ಹೋದಾಗ ಜಾತಿ ಎಂದರೆನ ನೀ ಕೆಳ
ಪಾಪಿ ದೇವರ ಲೋಕದ ಮ್ಯಾಲ ನಾ ಹರಿಸೆನೊ ರಕ್ತ ಎಂದ ಹೇಳ ............
........✍ಈಶ್ವರಯ್ಯ ಬಿದನೂರಮಠ
- ishwar
03 Feb 2018, 08:15 am
Download App from Playstore: