ನಲ್ಲೆಯ ನೆನಪು

ಕನಸಲಿ ಬಂದು ಕಾಡುವ ಕನ್ಯೆಯ ನಿದ್ದೆಯ ತೊರೆದು ಮರೆಬಹುದು,

ನೆನಪಲೆ ನಿಂತು ನಿತ್ಯವು ನೋಯಿಪ ನಲ್ಲೆಯನೆಂತು ನಾ ಮರೆಯುವುದು!!

ಓಗರದಲ್ಲಿಪ ಬೆಣ್ಣೆಯನೊಮ್ಮೆ ಪಕ್ಕಕೆ ಸರಿಸಿ ಉಣಲಹುದು,ಹಾಲಲೆ ಬೆರೆತಿಹ ಬೆಣ್ಣೆಯ ಜಿಡ್ಡನನೆಂತು ತಾನೆ ಹೊರ ಸರಿಸುವುದು!!

ನದಿಯಲಿ ಮುಳುಗುತ ಚಡಪಡಿಸುವನ ಹುಟ್ಟು ಹಾಕಿ ಉಳಿಸಲಹುದು,

ಸುನಾಮಿಗೆ ಸಿಲುಕಿದ ಅಂಬಿಗ ತನ್ನಯ ನಾವೆಯನೆಂತು ಉಳಿಸುವುದು!!

ಮುಂಜಾವಿನ ಮಂಜು, ತಂಗಾಳಿಯ ತಂಪು, ಹಚ್ಚನೆಯ ಹಸಿರುಗಳಿಲ್ಲದೆಯೂ ಇರಲಹುದು,

ಶ್ರವಣದಿ ಶ್ರಾವ್ಯ, ನೋಟದೆ ದೃಷ್ಟಿ, ಪ್ರಾಣದ ವಾಯುವ ತೊರೆದು ಹೇಗೆ ನಾ ಜೀವಿಪುದು!!

ಡಾ! ಸಿ. ಮುರಳೀಧರ

- ಡಾ!ಸಿ.ಮುರಳೀಧರ

03 Feb 2018, 02:57 pm
Download App from Playstore: