ಸಾಧನೆಯ ಹಾದಿ ನಮ್ಮ ಬಾಳಲಿ..
ಸಾಧನೆಯ ಹಾದಿಯಲಿ ಕಲ್ಲುಮುಳ್ಳುಗಳುಂಟು
ದೃಢ ನಿರ್ಧಾರಗಳು ಮನಸಿನಲ್ಲಿ ಹಾಗೇ ಉಳಿಯಲಿ
ಮಾಡಿದ ಸಂಕಲ್ಪವು ಮರೆಮಾಚದಿರಲಿ ಬದುಕಲಿ
ನೆನಪಿರಲಿ ನಮಗೆ ನಾನೊಬ್ಬ ಸಾಧಕನೆಂಬುವದ.
ಕೆಲಸದಲ್ಲಿ ನೂರೆಂಟು ಅಡಕು ತೊಡಕುಗಳುಂಟು
ಧೈರ್ಯವಿರಲಿ ನಷ್ಟವೊ ಲಾಭವೊ ಅದರೊಳಗುಂಟು
ಹಿಡಿದ ಕಾರ್ಯದಲಿ ಕೈ ಬಿಡದೆ ನಡಿಯುವದು ಬದುಕು
ಅಂಜದಿರಿ ಅಳುಕದಿರಿ ಸಾಧನೆಗೆ ಬೆಳಕು ನಿಮಗುಂಟು.
ಕಷ್ಟಗಳು ಬರುವದು ಮನುಷ್ಯನಿಗೆ ಹೊರೆತು
ಗಿಡ ಮರ ಬಳ್ಳಿ ಕಳ್ಳಿಗಳಿಗಲ್ಲ
ಗಿಡ ಮರಗಳ ಪೋಷಿಸಲು ನೂರು ಜನರುಂಟು ಈ ಜಗದೊಳಗೆ
ನಿನ್ನ ಕಾಲ ಮೇಲೆ ನೀ ನಿಲ್ಲುವದು ಆತ್ಮವಿಶ್ವಾಸ ನಿನ್ನ ಬಲ
ಹೆದರದಿರು ಸಾಧಕ ಗುರಿ ಮುಟ್ಟುವರೆಗು ನೀ ನಿಲ್ಲದಿರು.
ಗುರುವಿನ ಗಾದೆಗೆ ನೀ ತಲೆಬಾಗು
ನೀ ಎದ್ದು ನಿಂತಾಗಲೆ ಎಲ್ಲರು ತಲೆಬಾಗುವರು
ಹಿಡಿದ ಪಟ್ಟನು ಸಾಧಿಸಿ ತೋರಿಸು ಈ ಜಗಕೆ
ಎಂದಿಗು ಹಿಂಜರಿಯದಿರು ಬೇರೊಬ್ಬರ ಮನಕೆ.
ರಾತ್ರಿ ಹಗಲಿರುಳು ಶ್ರಮಿಸುವವನು ಸಾಧಕ
ಹೆದರಿ ಹಿಂದೆ ಸರಿಯುವವನು ನಿಸ್ಸಾಯಕ್
ನಿಮ್ಮ ಆಸೆಗಳ ಬೊಕ್ಕಸಕ್ಕೆ ಹಾಕಿರಿ ಕಡಿವಾಣ
ಇವೆಲ್ಲವನ್ನು ಮೀರಿ ನಿಂತವನೆ ಯೆಶಸ್ವಿ ಸಾಧಕನಾಗುವೆ ನೀ ಜಾಣ.
.......✍ಈಶ್ವರ್ ಬಿ
- ishwar
06 Feb 2018, 10:14 am
Download App from Playstore: