ಅಮ‌ರ‌ ಪ್ರೇಮ‌ದ‌.....

ಹಕ್ಕಿಯೊಂದು ಹಾರಿ ಬಂದು ಎದೆಯ‌ ಮೇಲೆ ಕುಳಿತು ಹಾಡಿತು ಒಲ‌ವಿನ‌ ರಾಗ‌ದ‌ಲಿ
"ನೀನೆ ನ‌ನ್ನ‌ ಒಲ‌ವಿನ‌ ತಾರೆ
ನ‌ನ್ನ‌ ಚ‌ಲುವಿನ‌ ಒಲ‌ವ‌ ಧಾರೆ
ಮಿನುಗುವ‌ ದೀಪ‌ದ‌ ಹೊಳೆವ‌ ಜ್ವಾಲೆ
ಎಂದು ಮುಗಿಯ‌ದ‌ ಕಾವ್ಯ‌ ಮಾಲೆ
ಕ‌ಡ‌ಲ‌ ಅಲೆಯ‌ ಮೇಲ‌ರ‌ಳಿದ‌ ಚಿತ್ತಾರ ಕ‌ಲೆ
ನಾ ನಿನ‌ಗೆ ನೀ ನ‌ನ‌ಗೆ
ನ‌ಮ‌ದೆಂದು ಅಳಿಯದ ಗಂದ‌ರ್ವ‌ಗಾನ‌ದ‌
ಸ‌ಖೀಗೀತೆಯ‌ ಸುಖ‌ದ‌ ಅಮ‌ರ‌ ಪ್ರೇಮ‌ದ‌ ಕ‌ಥನ"
ಒಮ್ಮೆ ಹಾಗೇನುತ‌ ಒಮ್ಮೆ ಹೀಗೆನುತ
ಒಮ್ಮೆ ಮೇಲೇರಿ ಮ‌ತ್ತೋಮ್ಮೆ ಕೆಳ‌ಗಿಳಿದು
ಅತ್ತ‌ ಇತ್ತ‌  ಸುತ್ತ‌ ಮುತ್ತ‌ ಮೇರೆ ಮೀರುವ‌
ಸ‌ರಿಸಾಟಿಯಿಲ್ಲ‌ದ‌ ಹಾರಾಟ‌ದ‌ ಕ‌ನ‌ಸು ನಿನ‌ದು
ನೋವೊ ನ‌ಲಿವೊ ಕ‌ಷ್ಟ‌ವೊ ನ‌ಷ್ಟ‌ವೊ
ಇಷ್ಟ‌ಪ‌ಟ್ಟು ಕ‌ಟ್ಟಿಕೊಂಡ‌ ಬ‌ದುಕು ನ‌ನ‌ದು
ನೀನೊ ಪ್ರ‌ಕ‌ೃತಿಯ ‌ಸು‍ಂದ‌ರ‌ ಕ‌ನ‌ಸು
ನ‌ನ‌ದೊ ಸುಡುಭೂಮಿಯ‌ ಕ‌ಡುಮುನಿಸು
ನ‌ಮ‌ದಲ್ಲ‌ ಅಮ‌ರ‌ ಪ್ರೇಮ‌ದ‌ ಕ‌ಥೆ
ನ‌ಮ‌ದೆಂದು ನ‌ಲ್ಮೆಯ‌ ಸ್ನೆಹ‌ದ‌ ವ್ಯ‌ಥೆ

- ಶಶಿಧರ ಹೆಚ್ ಎನ್

06 Feb 2018, 10:53 pm
Download App from Playstore: