ನಮ್ಮ ಸುಭಾಷ್ ಚಂದ್ರ ಬೋಸ್

ಅಪ್ರತಿಮ ದೇಶಪ್ರೇಮಿ
ನಮ್ಮ ಸುಭಾಷ್ ಚಂದ್ರ ಬೋಸ್..
ರಣವಿಕ್ರಮ ವೀರ ಸೇನಾನಿ
ನಮ್ಮ ಸುಭಾಷ್ ಚಂದ್ರ ಬೋಸ್..
ಅಗ್ರಗಣ್ಯ ಕ್ರಾಂತಿಕಾರಿ
ನಮ್ಮ ಸುಭಾಷ್ ಚಂದ್ರ ಬೋಸ್..
ಜನಮಾನ್ಯ ನೇತಾಜಿ
ನಮ್ಮ ಸುಭಾಷ್ ಚಂದ್ರ ಬೋಸ್.." ಪ "

ದೇಶದ ಮುಂದೆ ಐಸಿಎಸ್ ಹುದ್ದೆ ಕೇವಲ ಎಂದು
ದೇಶ ಸೇವೆ ನನಗೆ ಸಕಲ ಎಂದು..
ಕಣ್ಣಲ್ಲಿ ಸ್ವಾತಂತ್ರ್ಯದ ಕನಸು ಕಂಡು
ಗಾಂಧಿಯವರ ಅಹಿಂಸಾ ತತ್ವ ಬೇಡ ಎಂದು..
ಮನದಲ್ಲಿ ದೇಶಭಕ್ತಿ ತುಂಬಿ ಕೊಂಡು
ಸ್ವಾತಂತ್ರ್ಯಕ್ಕಾಗಿ ಸಂಘರ್ಷ ತತ್ವ ಅಸ್ತ್ರ ಮಾಡಿಕೊಂಡು..
ಸಿಂಹ ಸ್ವಪ್ನವಾಗಿ ಬ್ರಿಟಿಷ್ರ ಹುಟ್ಟಡಗಿಸಲು ಹುಟ್ಟಿ ಬಂದರೋ.....""

ಬ್ರಿಟಿಷ್ರ ಬಂಧನದಿಂದ ತಪ್ಪಿಸಿಕೊಂಡು
ದೇಶವಿದೇಶಗಳ ಸಹಾಯ ಪಡೆದುಕೊಂಡು..
ಐಎನ್ಎ ಸೈನ್ಯದ ನಾಯಕತ್ವ ವಹಿಸಿಕೊಂಡು
ದೆಹಲಿ ಚಲೋ ಎಂದು ಗರ್ಜಿಸಿ ಕೊಂಡು..
ಹೆಬ್ಬುಲಿಯಂತೆ ಮತ್ತೆ ನುಗ್ಗಿ ಬಂದರೋ
ಬಿಳಿಯ ದೊರೆಗಳ ಎದೆಯಲ್ಲಿ ಭಯವ ತಂದರೋ..." "

ನರನಾಡಿಯಲ್ಲಿ ಹೋರಾಡುವ ಹುಮ್ಮಸ್ಸು ತುಂಬಿ ಕೊಂಡು..
ರಕ್ತ ಕೊಡು ನನಗೆ ನೀನು ಎಂದು
ಸ್ವಾತಂತ್ರ್ಯ ಕೊಡುತ್ತೇನೆ ನಿನಗೆ ನಾನು ಎಂದು..
ಜೈಹಿಂದ್ ಎಂದು ಘೋಷಣೆ ಮೊಳಗಿಸಿಕೊಂಡು
ಬಿಳಿಯರ ರುಂಡ ಚೆಂಡಾಡಿದರು ನೋಡು..
ಮಾತೃಭೂಮಿಯಲ್ಲಿ ತ್ರಿವರ್ಣ ಧ್ವಜವ ಹಾರಿಸಿದರು ನೋಡು
ಭಾರತಿಯರ ಹೃದಯದಲ್ಲಿ ಅಮರರಾದರೂ ನೋಡು..." "

- ಸುರೇಶ್ ಟಿ ವಿ

07 Feb 2018, 09:11 am
Download App from Playstore: