ಅಮ್ಮ

ನೀನೆಷ್ಟೇ ಕಲಿತರು
ನಮಗೆಂದೆ ಮೀಸಲು
ಇಹುದೊಂದು ಕಾಯಕವು
ಪಾಕಶಾಲೆಯ ಹೊಣೆಗಾರಿಕೆಯು
ಎನ್ನಲು ನನ್ನವ್ವನಂದು
ಕುದಿಯಿತು ನನ್ನೊಳಗಿನ ರಕ್ತವು
ಆ ಅಬಲೆಯ ವೇದನೆ
ಹರಿಯದೆ ಮಾಡಿದೆನೆ
ಬಂದೀಖಾನೆಯಿಂದ ವಿಮುಕ್ತಳಾಗುವ ಶಪಥ
ನನ್ನೀ ಪಯಣದಲ್ಲಿ
ಕಣ್ಣೀರ ಕಡಲಿನಲ್ಲಿ
ಏನಾಗಿಹೆನೆಂದು ಚಿಂತಿಸಲಿಲ್ಲಿ
ತಿಳಿಯಿತು ತಡವಾಗಿಂದು
ನಾನೊಂದು ಕೈಗೊಂಬೆಯೆಂದು

ಜಪಿಸುತಿದ್ದೆನು ನಾನಂದು
ಉದ್ದರಿಸುವೆನು ಜಗವನೆಂದು
ಕಂಡ ಕಂಡ ದೈವಗಳಿಗೆ
ಆಸರೆ ನಾನಾಗುವೆನೆಂದು
ಶತಕೋಟಿ ಜೀವರಾಶಿಗಳಿಗೆ
ಆಶ್ರಯ ನೀಡಿ ಆದರಿಸುವ ದೇವನಿಗೆ
ನಾನಾಸರೆಯೇ............?

- ಶಕುಂತಲಾ

07 Feb 2018, 04:43 pm
Download App from Playstore: