ಮಿನುಗುವ ತಾರೆ.......
ನಷತ್ರಲೋಕದ ಮಿನುಗುತಾರೆಯೆ
ಮಿನುಗುವೆಯೇಕೆ ಸದಾ ನಿನಗೇನು
ಕೆಲಸವೆ ಮಿನುಗುತಲೆ ಇದ್ದು ಬಿಡು ಹಿಗೆಯೆ
ಜಗದ ಅಳಿವು ಉಳಿವನ್ನೆಲ್ಲ ನೊಡುತಾ ನಗುತಲೇ
ಇರುವೆಯಲ್ಲೆ...........
ನಿನಗೇನು ತಿಳಿದಿದೆಯೆ ಅದರ ಪರಿ
ಕಂಡಾಗಲ್ಲೆಲ್ಲ ಹೊಳೆಯುತಲೆ ಇರುವೆಯಲ್ಲ
ನೊಂದರು ಬೆಂದರು ನಗುತಲೇ ಬಾಳು
ಬೆಳಗಲೆಂದೆನೆ ನಿನ್ನ ಈ ಮಿನುಗುವ ಪರಿ........
ಅದರ ಅರ್ಥ ನನಗು ಸ್ವಲ್ಪ ಹೇಳಿ ಕೊಟ್ಟು ಬಿಡೆ
ನಿನ್ನ ಈ ಪರಿಯ ಮಿನುಗುವಿಕೆಯನ್ನ
ನಾನು ಯಲ್ಲವ ನೊಡಿ ನೊಂದರು ಬೆಂದರು
ನಿನ್ನಂತೆಯೆ ಮಿನುಗುತಲೇ ಇದ್ದು ಬಿಡುವೆ
ಮೌನದ ತಾರೆಯಂತೆ ಮಿನುಗುವ ತಾರೆಯಾಗಿ..........
ಬಾಳೆಂಬ ಅಂಗಳದಲ್ಲಿ.......
- ರಾಗಸಿರಿ....
15 Feb 2018, 06:21 pm
Download App from Playstore: