ಮೂಡಣ ರವಿ...

ರವಿ ಮೂಡಿಬಂದ ಮೂಡಣದಾಗ
ಕಿರಣ ಚೆಲ್ಲಿದ ಪ್ರಕೃತಿಗೆ ವೇಗ
ಪಕ್ಷಿಗಳ ಚಿಲಿಪಿಲಿ ಅವನಿಗೆ ಸ್ವಾಗತ
ಗಿಡ ಮರ ಜೀವಿಗಳೇ ಅವನ ಸ್ನೇಹಿತ....

ಮುಂಜಾನೆಯ ಇಬ್ಬನಿಯನ್ನೂ
ಹೀರುತ್ತಾನಿಂದ ರವಿಮಾಮ,
ಅವನನ್ನು ನೋಡಿ ನಾಚುತ್ತಾ
ಮರೆಯಾದ ಚಂದಮಾಮ....

ಬಾನಂಗಳದ ತುಂಬೆಲ್ಲಾ ಅವನದೇ ಚಿತ್ತಾರ
ನೋಡುವವರ ಕಣ್ಣಲ್ಲಿ ಮಿಂಚಿನ ಝೇಂಕಾರ.
ಹೊಳೆಯುವ ಸಮಯದಿ ಅವನ ವಯ್ಯಾರ
ಹೇಳುವನು ನಕ್ಕು ನಾನೇ ಸುಂದರ....

ಎಲ್ಲಾ ಜೀವಿಗಳ ಜೀವ ಅವನು
ಬಯಸುವುದಿಲ್ಲ ಯಾರಿಂದ ಏನ್ನನ್ನು
ಅವನಿಲ್ಲದೆ ಇಲ್ಲ ಜಗದಲ್ಲೇನು....
:::::: ಕೆ.ಜೆ.ಎಸ್.ಗೌಡ್ರು.ಹುಣಸೂರು.

- shasi kumar

20 Feb 2018, 07:24 am
Download App from Playstore: