ಪ್ರೇಮದ ಪೂಜೆ
ಪ್ರೇಯಸಿ ನಿನ್ನಯ ಪ್ರೇಮದ ಪೂಜೆಗೆ
ನಕ್ಷತ್ರದ ಹೂವು ಜಾರಿದೆ ಮೆಲ್ಲಗೆ!!
ನಿನ್ನ ಆಗಮನದ ಸುಂದರ ಸಂಜೆಗೆ
ಕನವರಿಸುತ ಮನ ದಾರಿಯ ಕಾದಿದೆ!!
ಪರದೆಯ ಹಿಂದೆ ಒಲವಿನ ನಂಟಿದೆ
ನಟಿಸುತ ಬಾರೇ ಪ್ರೀತಿಯ ಅಂಗಳಕೆ!!
ಸಂಪಿಗೆ ಕಂಪಿಗೆ ಚಂದಿರ ನಾಚಿದ
ಕಾತರಿಸಿದೆ ತನು ನಿನ್ನಯ ಸನಿಹಕೆ!!
ನಿಶಬ್ದದ ಈ ಸುಂದರ ಸಂಜೆಯು
ತಂಗಾಳಿಯ ಜೊತೆ ತಂಪನು ತಂದಿದೆ!!
ಮೆಲ್ಲಗೆ ನೀನು ಬಂದರೆ ಇಲ್ಲಿಗೆ
ನಿಲ್ಲದ ಕಾಲವು ನಿಲ್ಲುವ ಹಾಗಿದೆ!!
- ಪಿ.ಜಿ.ಜ್ಯೋತಿ
24 Feb 2018, 08:39 am
Download App from Playstore: