ಮೋಹಿನಿ

ಏನನ್ನು ಅರಿಯದು ಹರೆಯ
ಎಲ್ಲವನ್ನೂ ಬಯಸುವುದು ಹೃದಯ
ಎತಕ್ಕು ಸಾಲದಾಗಿದೆ ಸಮಯ
ಏನೆಂದು ವರ್ಣಿಸಲಿ ನನ್ನ ಗೆಳತಿಯ

ಕಾಣಿಸದೆ ಬಣ್ಣಿಸಿದೆ ಹೇಗೆ
ಅರಿಯದೆ ಸೆಳೆದೆ ಹೇಗೆ
ಕೇಳದೆ ಕರೆದೆ ಹೇಗೆ
ಮರೆತು ಮರೆಯಾದೆ ಹೇಗೆ

ಬಳುಕುವ ಬಳ್ಳಿಗೆ ಮೆರಗು
ನೆಟ್ಟ ದೃಷ್ಟಿಗೆಲ್ಲ ಬೆರಗು
ಪಾರಿಜಾತವು ಹೊಲದು ನಿನ್ನ ಸೊಬಗು
ತುಂಬಿರುವುದು ರಸಬಳ್ಳಿಯ ಸೊಗಡು

ತಾಳಲಾರೆ ಈ ವಿರಹದ ನೋವು
ಉಚಿತವಲ್ಲವೆ ಈ ಸಮಯದಲ್ಲಿ ಸಾವು
ಮರೆಯುವುದುಂಟೆ ನಿಮ್ಮನ್ನು ನಾವು
ಮರೆಯಾಗದಿರಿ ನಮ್ಮಿಂದ ನೀವು

@ ಸಲಹು .......

- ಸದಾ

24 Feb 2018, 08:39 pm
Download App from Playstore: