ನಗುನಗುತ ಇರಬೇಕು
ನಗುನಗುತ ಇರಬೇಕು
ನೂರು ಆರಾಗಲಿ
ಆರು ನೂರಾಗಲಿ..
ನಕ್ಕು ನಗಿಸುತ ಬಾಳ್ಬೇಕು
ಯಾರೇನೇ ಅನ್ನಲಿ
ಯಾರೇನೇ ಮಾಡಲಿ..
ಆಗಿದ್ದು ಒಳ್ಳೆದೇ ಅನ್ಕೊಳಿ
ಆಗೋದು ಒಳ್ಳೆದೇ ಅನ್ಕೊಳಿ.. " ಪ "
ಇವತ್ತು ಇರೋರು ನಾಳೆ ಇರೋಲ್ಲ
ನಿನ್ನೆ ಅನ್ನೋದು ಮತ್ತೆ ಬರಲ್ಲ..
ನಾಳೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ
ಇವತ್ತು ಖುಷಿಖುಷಿಯಾಗಿರೋಣ ನಾವೆಲ್ಲ..
ಈ ಬಾಳು ಒಂದು ಹೂವಿನಂತೆ ಬ್ಯೂಟಿ
ಏನೇ ಮಾಡಿದ್ರೂ ಬಾಡೋದು ಗ್ಯಾರಂಟಿ..
ನಗುತ ಬಾಳಿದರೆ ಸ್ವರ್ಗವು ಆಗದು ನಿನಗೆ ಸಾಟಿ
ಅಂದದ ನಗುವ ನೋಡಿ ಆ ಚಂದ್ರನು ಮಾಡಬೇಕು ನಿನ್ನ ಭೇಟಿ..
ಜೀವನ ಒಂದು ಹಾವು ಏಣಿಯ ಆಟ
ಬಿಟ್ಟಾಕು ಫಸ್ಟ್ ಲಾಸ್ಟ್ ಅನ್ನೋ ಪಟ್ಟ..
ಏರಲೇಬೇಕು ಎಲ್ಲರೂ ಒಂದು ದಿನ ಚಟ್ಟ
ಅನುಕ್ಷಣ ಹಾರಿಸೋಣ ನಗುವಿನ ಪಟ..
ನೂರು ಕೋಟಿ ಕೊಟ್ಟರೂ ಸಿಗದು ನಗು ಎಂಬ ಬಂಗಾರ
ನೋವು ಸಾವಿರ ಇದ್ದರೂ ನಗುತಿದ್ದರೆ ನಿನಗೆ ನೀನೇ ಕುಬೇರ..
ಚಿಂತೆ ಎಂದಿಗೂ ತನುಮನ ಸುಟ್ಟು ಹಾಕುವ ಚಿತಾಗಾರ
ಅನುದಿನ ಅನುಕ್ಷಣ ಹೃದಯದಲ್ಲಿ ಹರಿಸಬೇಕು ಆನಂದ ಸಾಗರ..
- ಸುರೇಶ್ ಟಿ ವಿ
01 Mar 2018, 11:00 am
Download App from Playstore: