ನೆನೆದ ನೆನಪು
ನೆನೆ ನೆನೆದು ನಿನ್ನ
ಕಾದಿರುವೆ ಚಿನ್ನ
ನೀ ನನಗೆ ಹೊನ್ನ ಕಲಶ!!
ನಿನ್ನ ನಗುವ ಮೊಗವ
ನಾ ನೆನೆಯುತಿರಲು
ನನ್ನೊಳಗೆ ಏನೋ ಹರುಷ!!
ದಿನ ನಿನ್ನ ನೆನಪು
ನನ್ನೊಳಗೆ ಇಣುಕಿ
ಕಂಡಿರಲು ಏನೋ ಸೊಗಸು!!
ನನ್ನೊಲವ ಭಾವ
ನಿನ್ನೊಳಗೆ ಹರಿಸ
ಬಯಸಿಹುದು ನನ್ನ ಮನಸು!!
ನಾ ಇಲ್ಲಿ ನಿನ್ನ
ನೆನೆದಿರಲು ಜೇನ ಮಳೆ
ಸುರಿ ಸುರಿದು ಸವಿಯ ತರಲಿ!!
ನಿನ್ನ ನೆನಪು ನನ್ನ
ಜೊತೆ ಇರಲು ಚಿನ್ನ
ಈ ಬದುಕು ಮುಗಿಯದಿರಲಿ!!
- ಪಿ.ಜಿ.ಜ್ಯೋತಿ
01 Mar 2018, 10:32 pm
Download App from Playstore: