ಸಂಜೆ ಸಲ್ಲಾಪ
ಸಂಜೆ ಹೊತ್ತು
ಸನಿಹ ಕೂತು
ಮನಸು ಸೋತು
ಬುಜಕೆ ಆತು
ಏನೋ ಮಾತು
ಮೈಯ ಮರೆತು..
ಕಣ್ಣಾ ಬೆಸೆದು
ಕೈಯಾ ಹೊಸೆದು
ಮೈಯಾ ಮಸೆದು
ಚಿಂತೆ ಎಸೆದು
ಪ್ರೀತಿ ಹಸಿದು
ಪ್ರಣಯ ಬಸಿದು..
ಕತ್ತಲ ಮೆರುಗು
ತೀಡಿದೆ ಸೆರಗು
ನಾಚಿಕೆ ಕರಗು
ತುಟಿಯಲಿ ಬೆರಗು
ಹತ್ತಿರಕೆ ಜರುಗು
ಕಾಮನೆಯ ಬುರುಗು.
- ಶ್ರೀಗೋ.
05 Mar 2018, 08:02 pm
Download App from Playstore: