ತಾಯಿ ಬೇರು

ತಾಯಿ ಬೇರು ನೆಲದ ಪಾಲು
ಭುವಿಯ ಅಡಿಯಲಿ ಸಾಗಿದೆ!!
ಮಣ್ಣ ಒಳಗೂ ಮಮತೆ ಇಟ್ಟು
ತನ್ನಯ ಮಕ್ಕಳ ಸಾಕಿದೆ!!

ರೆಂಬೆ ಕೊಂಬೆ ಹೂವು ಹಣ್ಣು
ಹಸಿರು ಎಲೆಗಳ ಸೆಲೆಯಿದೆ!!
ಜಗವು ಕಾಣೋ ಸೋಬಗ ಹಿಂದೆ
ತಾಯಿ ಬೇರು ಅಡಗಿದೆ!!

ಬಂದು ಬಳಗ ಎಂಬ ಸೆಳೆತ
ಕಾಣದೇನೇ ಚಿಗುರಿದೆ!!
ನೀರು ಗೊಬ್ಬರದ ಪೋಷಣೆಯ
ತಾ ಮರೆಯದಂತೆ ನೀಡಿದೆ!!

- ಪಿ.ಜಿ.ಜ್ಯೋತಿ

08 Mar 2018, 07:57 am
Download App from Playstore: