ಗಾಜಿನ ಮನೆಯ ಸಂಭ್ರಮ

ಗಾಜಿನ ಮನೆಯಲ್ಲಿ
ಸೋಜಿಗ ನಲ್ಲನೇ!!
ಎಲ್ಲಿಯೇ ನೋಡಲಿ
ನಾ ಕಾಣುವೆ ನಿನ್ನನೇ!!

ಓಡುವ ಮೋಡದಂತೆ
ಮಿಂಚುವ ಮಿಂಚಿನಂತೆ!!
ಹರಿಯುವ ಜಲದಂತೆ
ಸರಿಯುವ ಕಾಲದಂತೆ!!

ನೀ ಕಾಣುವಾಗ ನಾನು
ನನ್ನನ್ನೇ ಮರೆತಂತೆ!!
ಸೇರ ಬಂದರೆ ನಾನು
ನೀ ಬೇರೆಲ್ಲೋ ಕಂಡಂತೆ!!

ಸೋಜಿಗವು ವಿಸ್ಮಯವು
ನನ್ನ ನಿನ್ನ ಸಂಗಮವು!!
ಸುಂದರವು ಸಂತಸವು
ಗಾಜಿನ ಮನೆಯ ಸಂಭ್ರಮವು!!

- ಪಿ.ಜಿ.ಜ್ಯೋತಿ

17 Mar 2018, 01:52 pm
Download App from Playstore: