ಹೂ...ಮಳೆ

ಈ ಸಂಜೆ ತಂಪು ಗಾಳಿಯೊಡನೆ
ಸುರಿದ ಹೂ ಮಳೆ!!
ನನ್ನೊಲವ ರಾಗದೊಡನೆ ಬೆರೆತು
ನಗುವ ಹೂ ಮಳೆ!!

ಹೂ ಮಳೆ ಬದುಕೊಂದು‌ ಹೂ ಮಳೆ
ಕಾಯದೇ ತಾ ಸುರಿದ ಹೂ ಮಳೆ!!

ನಿನ್ನೆಯವರೆಗೂ ಬರದೇ ಮುನಿದು
ಕುಳಿತು ಹೂ ಮಳೆ!!
ಇಂದು ತಾನಾಗಿಯೇ ಒಲಿದು
ಬಂದ ಹೂ ಮಳೆ!!

ಹೂ ಮಳೆ ಎಲ್ಲೆಲ್ಲೂ ಹೂಮಳೆ
ಕಾಯದೇ ತಾ ಸುರಿದ ಹೂ ಮಳೆ!!

ನಿರಾಸೆಯ ಈ ಬದುಕು ಕಂಡ
ಚೆಲುವ ಹೂ ಮಳೆ!!
ಆಸೆಯ ಬಳ್ಳಿಯಲ್ಲಿ ಅರಳಿದ
ಕೂಸು ಹೂ ಮಳೆ!!

ಹೂ ಮಳೆ ಭೂ ಸ್ವರ್ಗ ಹೂ ಮಳೆ
ಕಾಯದೇ ತಾ ಸುರಿದ ಹೂ ಮಳೆ!!

- ಪಿ.ಜಿ.ಜ್ಯೋತಿ

17 Mar 2018, 02:55 pm
Download App from Playstore: