ವೀಣೆಯು ಕಣ್ಣ ತೆರೆಯಿತು
ವೀಣೆಯು ಕಣ್ಣ ತೆರೆಯಿತು
ಕವಿಯ ಮನವನು ಕಲುಕಲು!!
ಸಂಜೆಯು ರಂಗೇರಿತು
ಭುವಿಯ ಗಮನವ ಸೆಳೆಯಲು!!
ಹೊಸತು ಗಾನ ಕವಿಯ ಕವನ
ರಾಗ ತುಂಬಿ ಹರಿದು ತನನ!!
ಸಂಜೆಯಲ್ಲಿ ನಗುವ ಭುವನ
ಕಂಡು ಹರುಷದಿ ನಲಿದ ನಯನ!!
ತಂತಿ ಮೀಟುವ ಮುನ್ನ ಭಾವವು
ಜೀವ ತಳೆಯಿತು ಕವನದಿ!!
ಸಂಜೆ ಕತ್ತಲು ಕವಿಯುವ ಮುನ್ನ
ಹೊನ್ನ ಸುರಿಮಳೆ ಗಗನದಿ!!
- ಪಿ.ಜಿ.ಜ್ಯೋತಿ
17 Mar 2018, 06:05 pm
Download App from Playstore: