ಒಬ್ಬಂಟಿ ಆದ ನಂತರ

ಕೆರೆಯ ಏರಿಯ ಮೇಲೆ
ನೀ ಇಟ್ಟ ಹೆಜ್ಜೆ ಗುರುತದು
ಮೂಡಿ ಬಂದಿತೇ
ನನ್ನಯ ಎದೆಯ ಒಳಗೆ!!

ಗಾಳಿ ಬೀಸುವ ಮುನ್ನ
ಸೊರಗಿದ ತರಗೆಲೆಯು
ಉದಿರಿತೇ ನೀ ಹಿಂದಿರುಗಿ
ಬಾರದಿರುವುದನ್ನು ಅರಿತು!!

ಬಡಪಾಯಿ ಹೃದಯದಲ್ಲಿ
ಬರಗಾಲದ ದಿನವಿಂದು
ಗೆಳತಿ ನೀ ದೂರಾಗಿ
ನಾ ಒಬ್ಬಂಟಿ ಆದ ನಂತರ!!

- ಪಿ.ಜಿ.ಜ್ಯೋತಿ

17 Mar 2018, 06:30 pm
Download App from Playstore: