ಅರಿ ನೀನು ನಿನ್ನನ್ನ. . . .
ಆತ್ಮವೆಂಬಾ ರಸವತ್ತಾದ ಇಳೆಯಲ್ಲಿ,
ಅಸ್ತಿ ಎನ್ನುವ ನಿನ್ನ ಆಸ್ತಿಯು,
ಸುತ್ತಿ ಸುಸ್ತಾಗಿ ನಶಿಸಿ ಹೋಗುವಾ ಮುನ್ನ,
ದುರ್ಗುಣಗಳ ಕಳೆಯನ್ನು ಕಳೆದು,
ಸದ್ಗುಣಗಳ ಬೀಜಗಳ ಬಿತ್ತಿ,
ಪ್ರೇಮವೆಂಬಾ ನೀರನ್ನು ಹಾಯಿಸಿ,
ಶಾಂತಿಯಿಂದ ಕಾದು ಕಾಪಾಡಿ,
ಪರಿಶುದ್ಧತೆಯ ಫಸಲನ್ನು ಬೆಳೆದು,
ಪ್ರೀತಿಯಿಂದ ಹಂಚಿ ತಿನ್ನುವವಗೆ,
ಬೇಕಿಲ್ಲ ಯಾವ ದೈವದಾ ಗೊಡವೆ,
ಕಾಯಕವೇ ಅವಗೆ ತರುವುದು ಕೀರ್ತಿಯ ಒಡವೆ,
ಹೊತ್ತು ಹೋಗುವಾ ಮುನ್ನ,
ಅರಿ ನೀನು ನಿನ್ನನ್ನ,
ಅದುವೇ ಆತ್ಮಸಾಕ್ಷಾತ್ಕಾರದ ಸತ್ಯ ಪರಮಾನ್ನ. . .
----- ತಿಪ್ಪೇಸ್ವಾಮಿ -----
- tippu
26 Mar 2018, 06:00 pm
Download App from Playstore: