ನನಗೆ ಗೊತ್ತಿರಲಿಲ್ಲ ಗೆಳತಿ..

ನನಗೆ ಗೊತ್ತಿರಲಿಲ್ಲ ಗೆಳತಿ,
ಕಣ್ಣು ಹಾಯಿಸಿದಷ್ಟು ವಿಸ್ತಾರ
ಮರುಭೂಮಿಯ ನಡುವೆಯೂ
ಸುಂದರ ಹೂದೋಟವ ಅರಳಿಸಲು
ನಿನ್ನ ಕಿರು ನಗುವೊಂದೇ ಸಾಕೆಂದು.

ನನಗೆ ಗೊತ್ತಿರಲಿಲ್ಲ ಗೆಳತಿ,
ನಿನ್ನೊಂದು ಮಾತಿನಿಂದಲೇ
ಮನದ ಕಸರುಗಳೆಲ್ಲ ಕಳೆದು
ಹೊಸ ಚಿಗುರುಗಳು ಅರೆ ಕ್ಷಣದಲ್ಲಿ
ಚಿಗಿತು ಬಿಡುವವೆಂದು.

ನನಗೆ ಗೊತ್ತಿರಲಿಲ್ಲ ಗೆಳತಿ,
ನಿನ್ನ ಮೃದು ಮೈ ಸೋಕಲು
ನನ್ನ ನರ ನಾಡಿಗಳಲು ಮಿಂಚು
ಸುಳಿದು ಹೊಸ ಹೊಂಗನಸು
ಹುಟ್ಟಬಹುದೆಂದು..

ನನಗೆ ಗೊತ್ತಿರಲಿಲ್ಲ ಗೆಳತಿ,
ನೀನೇ ನೀರು ಹಾಕಿ ಸಾಕಿ
ಸಲುಹಿದ ಹೂಗಿಡದ ಮೇಲೆ
ನಿನ್ನ ಮೃದು ಪಾದವನ್ನಿಟ್ಟು ಹೊಸಕಿ
ನಿರ್ದಯಿಯಾಗಿ ಹೊರಟು ಬಿಡುವೆಯೆಂದು..

- ಶ್ರೀಗೋ.

01 Apr 2018, 10:08 pm
Download App from Playstore: