ಮೀರಾ ಮಾಧವ
ಮನಸಿನ ಮಾತೊಂದು ಕೇಳುವೆಯ ಮಾಧವ ಮುದ್ದಾದ ಮೀರಾ ಹಾಡುತಿಹಳು ನಿನಗಾಗಿ ಪ್ರಣಯಗೀತೆ ನಾಚಿ ನಿನ್ನ ನೆನೆದು.
ಕೈಯಲ್ಲಿ ಪುಟ್ಟ ಕೋಳಲು
ಕಣ್ಣಲ್ಲಿ ಪ್ರೀತಿಯ ಹೊನಲು
ಅವಳು ನಿನ್ನ ನೆನೆದು ಹಾಡಲು
ಕಳೆದು ಹೋಯಿತು ಮನವು ನಿನ್ನ ಸೇರಲು.
ಸಿಂಧೂರ ವದನ ನಿನ್ನ ನಾಮ ಸ್ಮರಣ ಮಾಡುತಿಹಳು ಮೀರಾ ಕೊಂಚ ಉಸಿರು ಸಡಿಲಗೊಳಿಸಿ ನಿನ್ನ ತುಂಟಾಟಗಳ ಸ್ಮರಿಸಿ ಮುರಳೀಧರ.
ನೋಡು ಚೂರು ಅವಳ ಚೆಲುವು ಮುಡಿದಳು ಜಾಜಿ ಮಲ್ಲಿಗೆಯ ಹೂ, ತಾಳಕ್ಕೆ ಹೆಜ್ಜೆ ಹಾಕುತಿಹಳು ಬೆಳ್ಳಿ ಗೆಜ್ಜೆ ಕಟ್ಟಿ ಮನಸಲ್ಲಿ
ನಿನ್ನ ರೂಪವನಿಟ್ಟಿ.
ಝರಿ ಅಂಚು ಸೀರೆ
ಕೆಂಬಣ್ಣದ ರವಿಕೆ
ಇರುಳು ಕೂಡ ನೋಡಿ
ನಾಚುವಂತಹ ಕಪ್ಪು ಕೂದಲ ರಾಶಿ,
ತಾನೇ ಎಂದು ತಿಳಿದಿಹಳು
ನಿನ್ನ ಹೃದಯದರಸಿ ಬಂದಿಹಳು ನಿನ್ನ ಅರಸಿ.
- ಚುಕ್ಕಿ
02 Apr 2018, 08:41 pm
Download App from Playstore: