ನೀನೊಮ್ಮೆ ನೆನಪಾದಾಗ..!!!

ಎದೆಯೊಳಗಿನ ಅಂಚು
ನಿನ್ನ ಬಯಸುತ್ತಿದೆ
ಅದಕ್ಕೇನು ಗೊತ್ತು ?
ನಾನಿಂದು ಸನ್ಯಾಸಿ ಎಂದು !!
ಯೋಚನೆಗಳ ಸಂಚು
ನೀನ್ನ ಕಡೆ ಸಾಗುತ್ತಿವೆ
ಅದಕ್ಕೇನು ಗೊತ್ತು ?
ನಾನಿಂದು ತ್ಯಾಗಿ ಎಂದು !!
ಏಕಾಂತವು ಸಹ
ಚಿತ್ತ ಕೆಡಿಸುತ್ತಿದೆ
ಅದಕ್ಕೇನು ಗೊತ್ತು ?
ನಾನೊಬ್ಬ ಅಲೆಮಾರಿ ಎಂದು !!
ಸರ್ವಸ್ವಗಳೇ ಇಂದು
ಸಾಕ್ಷಿಯಾಗಿ ನಿಂತಿವೆ
ಅದಕ್ಕೇನು ಗೊತ್ತು ?
ಸತ್ತಿರುವ ಈ ಮನಸ್ಸು
ಏಳುವುದಿಲ್ಲವೆಂದು !!!

- ನಾಗರಾಜ ಬಾಕೆ೯ರ್

05 Apr 2018, 11:53 pm
Download App from Playstore: