ಆಕಾಶ ಪ್ರೇಮ
ಆಕಾಶದಲ್ಲಿ ನಕ್ಷತ್ರ ಕೋಟಿ
ಆ ಚಂದ್ರನಂತೆ ನೀ ತುಂಬ ಚೂಟಿ!!
ತಂಗಾಳಿ ಜೋಡಿ ಹೊಂಬಾಳೆ ಹಾಡಿ
ತಿಂಗಳ ಬೆಳಕಲ್ಲಿ ನಿನ್ನಯ ಮೋಡಿ!!
ಓ ನನ್ನ ಪ್ರೇಮಿ ನಾನಾದೆ ಮೌನಿ
ಮಾತಾಡೋ ಮುನ್ನ ನೀ ನೋಡು ನನ್ನ!!
ಈ ನನ್ನ ಕಣ್ಣ ಒಳಗಿರುವ ನಿನ್ನ
ಹೊಳಪೆಂಬ ಹುಣ್ಣಿಮೆಯೇ ಬಲು ಚೆನ್ನ!!
ಸಾಗರದ ಆಚೆ ಸಾವಿರದ ಕನಸು
ನೀ ಸಿಕ್ಕ ಮೇಲೆ ಕನಸೆಲ್ಲ ನನಸು!!
ಅಪರೂಪವಾದ ಈ ನಮ್ಮ ಪ್ರೇಮ
ಇರಬೇಕು ಹೀಗೆ ಪ್ರತಿಯೊಂದು ಜನುಮ!!
- ಪಿ.ಜಿ.ಜ್ಯೋತಿ
16 Apr 2018, 10:20 pm
Download App from Playstore: