......ಒಮ್ಮೆ ನೋಡಿಬಿಡು

ಆರದ ಜೀವಕ್ಕೆ
ನಾರದನ ಆಶೀರ್ವಾದ
ಮಾಯದ ಪ್ರೀತಿಗೆ
ನಿನ್ನದೇ ಜೀವನಾದ..
ಮಾಡದ ಫೋನಿಗೆ
ಆಡದ ಮಾತಿಗೆ
ನೂರು ನಗೆಯಲಿ
ಇತ್ತು ಸುಖ ಸಂತೋಷ..
ಹೇಳದೆ ಹೋದೆ
ಕಾರಣ ನೂರಾರು
ಆದರೂ ಕೇಳು ನೀ
ನನ್ನೀ ತಕರಾರು..
ಬಾಯಾರಿ ನಿಂತಿಹೆ
ನೀ ಬರಲೆಂದು ಕಾದಿಹೆ
ಈ ಬಡ ಜೀವದ ಬಾಗಿಲಿಗೆ
ಇಣಿಕ್ಕೊಮ್ಮೆ ನೋಡಿಬಿಡು..

- ನಾಗರಾಜ ಬಾಕೆ೯ರ್

18 Apr 2018, 01:03 pm
Download App from Playstore: