ಸೋತಿರುವೆ ಮತ್ತೆ ಮತ್ತೆ..
ಸೋತಿರುವ ಈ
ಹೃದಯ ಮತ್ತೆ ಮತ್ತೆ
ಸೋಲುವುದೇನು
ನಂಗೆ ಹೊಸತೇನಲ್ಲ...
ಲದ್ದೆಯನ್ನು ನೋಡಿ
ಕೈ ಮುಗಿ ಎಂದರೂ
ಮುಗಿದು ಬಿಡುವಂತ
ಮೂರ್ಖ ನಾನು...
ಅದೆಂತಹ ಆಕರ್ಷಣೆ
ನನ್ನ ಸೆಳೆಯುವಂತಹ
ಮನ ಕಲಕುವಂತಹ
ನಿನ್ನಾಂತರ್ಯದ ಸೌಂದರ್ಯ...
ದಯಮಾಡಿ ಕೇಳುವೆನು
ಬರಲೇ ಬೇಡ ನೀನು
ನನ್ನೆದುರಿಗೆ ಎಂದೆಂದೂ
ಮತ್ತೆ ಸೋಲಲು ನಂಗಿಷ್ಟವಿಲ್ಲ
ಇಂತಿ ನಿಮ್ಮ ಸ್ನೇಹ ಸಿಂಚನ
ನಾಗರಾಜ ಬಿ {9743216235}
- ನಾಗರಾಜ ಬಾಕೆ೯ರ್
18 Apr 2018, 01:59 pm
Download App from Playstore: