ವಿರಹ-ಬರಹ

ಸಾವಿರ ಸುಳಿಗಳ ಕಡಲಲಿ ಬೆರೆತರೂ
ಕರಗದೇ ಕೊರಗುವ ಕಣ್ಣೀರು
ತುಷಾರವ ಹೊದ್ದಿರುವ ತಂಗಾಳಿಗೆ ಸಿಕ್ಕರು
ತಂಪಾಗದೆ ಬಿಸುಪೇರುವ ನಿಟ್ಟುಸಿರು

ಅನಂತ ಪುಟಗಳು ಮುಗಿದರೂ
ಇನ್ನೂ ಮಿಗುವ ನೆನಪುಗಳು
ಜೀವಂತ ಇರಲು ಬಯಸಿದರೂ
ಕರುಣೆ ತೋರದ ಕನಸುಗಳು

ಸಾವಿರ ಸೂರ್ಯರು ಬಂದರೂ ಬತ್ತದ ನೋವಿರಲು
ನಿಲ್ಲದದೇಕೋ ತಿಳಿಯದು ಹೃದಯ
ಸಾವಿರ ನಿರೀಕ್ಷೆಗಳು ಸುಳ್ಳಾದರೂ ಸೋಲದ ಮನಸಿರಲು
ಚಲಿಸದದೇಕೋ ತಿಳಿಯದು ಸಮಯ

ಮನಸಿನೆಲ್ಲಾ ಮೂಲೆಯನು ದಹಿಸಿದ ಮೇಲೂ
ಆರದೇ ಇನ್ನೂ ಉರಿಯುತ್ತಿದೆ ವಿರಹ
ಭಾವನಾಂಭುದಿಯು ಬತ್ತಿ ಹೋದ ಮೇಲೂ
ಬರಿದಾಗದು ಈ ಕಣ್ಣೀರ ಬರಹ

- ಅಕವಿ

18 Apr 2018, 07:56 pm
Download App from Playstore: