ಹೆಣ್ಣ ಕೂಗು
ಹೆಣ್ಣ ಕೂಗು ಕೇಳಿ ಕಣ್ಣು ತೆರವರೆಲ್ಲಿ
ಯಾರು ಇರುವರಯ್ಯ ಈ ಸಮಾಜದಲ್ಲಿ
ಭಾರತೀಯ ಮಹಿಳೆಗಿಂದು ಸ್ಥಾನವೆಲ್ಲಿದೆ
ಬರಿಯ ಭೋಗ ವಸ್ತುವಾಗಿ ಅವಳ ಬದುಕು ಬಾಡಿದೆ,
ಬಡ ಕುಟುಂಬದಲ್ಲಿ ಬೆಳೆದ ಹೆಣ್ಣ ಬಾಳಿಗೆ
ಇಂದು ಬೆಳೆದಿದೆ ವರದಕ್ಷಿಣೆ ಕಾರ್ಮೋಡ ಕವಿದಿದೆ
ಬಳಿಪಶುವೀ ಮಹಿಳ ನೀಚ ಸಂಪ್ರದಾಯಕೆ
ಎಲ್ಲಿ ಭದ್ರ ಕೋಟೆ ಕಟ್ಟುವವರು ಈ ಸುನಾಮಿಗೆ.
- Hasan Muhaz
19 Apr 2018, 04:30 pm
Download App from Playstore: