ಶೋಧನೆ

ಕನಸಿನ ಮಳೆಯಲಿ
ತುಂತುರು ಹನಿಯಾಗಿ
ನಗು ಬೀರುವ ಮನದಲಿ
ಪ್ರೀತಿ ಅರಳಿಸು ಎದೆಯಲ್ಲಿ

ಕಟ್ಟಿದ ಕನಸೊಂದು
ಮನದಲಿ ನೆನಪಾಗಿ
ಬಯಸುತ್ತಿದೆ ನಿನ್ನ
ನಿಸರ್ಗದ ಮಡಿಲಿಲ್ಲಿ
ಜೀವನ ಜೋಕಾಲಿ ತುಗೋಣ ಬಾ

ಮಂಜು ಕವಿದ ಪ್ರೀತಿಗೆ
ಬೆಚ್ಚಗೆ ಕರಗಲು ನಿನ್ನ ಕಿರು ನಗೆ ಬೇಕು
ಬಾ ನನ್ನ ಸನಿಹಕೆ
ಸಮಯ ಸರಿಯುತ್ತಿದೆ ಮಿಂಚಾಗಿ
ಎಷ್ಟು ಕರೆದರೂ ಬಾರದ ನೆನಪಿನ ಕನಸ್ಸೊಂದು ತೂಗುತಿದೆ
ಪ್ರೀತಿಗೆ ಮನಸೋತ ಜೀವನದಲ್ಲಿ ಅನುರಾಗದ ಶೋಧನೆ

- ಎ ಜಿ ಶರಣ್

19 Apr 2018, 11:18 pm
Download App from Playstore: