ಮಳೆ ಮತ್ತು ನಾನು

ಇಳೆಗೆ ತುಂತುರು ಮಳೆಯ ಸಿಂಚನ
ತನುವು ನೆನೆಯೇ ನವಿರಾದ ಕಂಪನ
ನಡುಗೋ ಅಧರಗಳ ನೋಡಿ ಮಳೆಹನಿಗೆ
ಬೇಕಿದೆ ಈಗಲೆ ಜೇನಸವಿಯ ಬಾಡಿಗೆ

ಅಪ್ಪಿ ಜೊತೆಯಾಗಿವೆ ಮೈಮರೆತು ಕೈಗಳು
ತಣ್ಣನೆ ಗಾಳಿಯು ತನುವ ಸೋಕಿ ಸಾಗಲು
ಜಾರಿದ ಮುಂಗರುಳದಂತು ಒಂದೇ ಯಾಚನೆ
ತುಟಿಯ ಅಂಚಲಿ ಕಿರುನಗೆಗಾಗಿ ನಿವೇದನೆ

ಮುನಿಸ ತೋರುತ ಕಾಡೋ ಮನಸು
ನಗುತಲೇ‌ ಹಾಗೆ ರಮಿಸುತಿದೆ ಈಗ ತುಸು
ಏತಕಿ ಎಂದೂ ಇರದ ಸವಿ ಬದಲಾವಣೆ
ತಿಳಿಯಲು ಶುರುವಿಟ್ಟಿದೆ ತನ್ನೊಳಗೆ ವಿಚಾರಣೆ

ಮುದ್ದಿಸಿ ಕಾಡುವಂತ ಸುಂದರ ಯಾತನೆ
ಬಿಸಿಯುಸಿರು ತಣಿದಿದೆ ಹಾಗೆ ಸುಮ್ಮನೆ
ಎಂದೂ ಹೀಗೆ ಇರಲಿ ಈ ಎಲ್ಲ ಭಾವನೆ
ತನುವ ತಣಿಸಿ ಮನವ ಕುಣಿಸಲೆನ್ನುವ ಕಾಮನೆ

- ಶ್ರೀಕಾವ್ಯ

20 Apr 2018, 08:33 pm
Download App from Playstore: