ಮತ ಗೊಂದಲ !
ಒಬ್ಬ ಭ್ರಷ್ಟ, ಇನ್ನೊಬ್ಬ ದುಷ್ಟ
ಅವನು ಕಳ್ಳ, ಇವನು ಸುಳ್ಳ
ಆ ಪಕ್ಷ ಕೋಮುವಾದಿ
ಈ ಪಕ್ಷ ಜಾತಿವಾದಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?
ಅವನಿಗೆ ಗೊತ್ತಿದೆ ಕೋಟಿ ದೋಚುವ ಕಲೆ
ಇವನ ಕೈಗೆ ಅಂಟಿಕೊಂಡಿದೆ
ಅಮಾಯಕರ ರಕ್ತದ ಕಲೆ !
ಅದೋ ನಾಮಪತ್ರ ಸಲ್ಲಿಸಿ ಆಯ್ತು ಅತ್ಯಾಚಾರಿ
ಇದೋ ಕೈ ಮುಗಿದು ಬೇಡಿ ಬರುತಿಹನು
ನಿತ್ಯ ದುರಹಂಕಾರಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?
ಜನರ ಜೇಬಿಗೆ ಕತ್ತರಿ ಹಾಕುವ ಕದಿಮನೊಬ್ಬ
ತಿಜೋರಿ ದೋಚಿ ವಿದೇಶದಲ್ಲಿ
ಬಚ್ಚಿಡುವ ಭೂಪನೊಬ್ಬ.
ಕೊರಳ ಪಟ್ಟಿ ಹಿಡಿದು ಹೊಡೆದಾಡಿಕೊಂಡ
ಬದ್ದ ರಾಜಕೀಯ ವೈರಿಗಳು
ದಿನಾ ರಾತ್ರಿ ಒಂದೇ ತಟ್ಟೆಯಲ್ಲಿ
ಬಡವರ ಹೆಣ ತಿನ್ನುತಿಹರು!
ಯಾರಿಗೆ ಮುದ್ರೆಯೊತ್ತಲಯ್ಯ ನಾನು?
- ಶ್ರೀಗೋ.
20 Apr 2018, 11:21 pm
Download App from Playstore: