ಬೇಕಾಗಿದ್ದಾರೆ...
ಬೇಕಾಗಿದ್ದಾರೆ...
ನಮಗೆ ಒಂದಿಷ್ಟು ಮಂದಿ
ನಿನ್ನೆ ಇಂದು ನಾಳೆಯು...
ಭಾರವೇ ಇಲ್ಲದ
ಹತ್ತಿಯಂತ ಕೆಲಸ
ಕತ್ತೆಯ ಸ್ವರ ಸಂಗೀತ
ಬಲ್ಲವರು...
ಬೇಕಾಗಿದ್ದಾರೆ...
ಹಸ್ತ ಪ್ರದರ್ಶನ
ಕೃಷಿ ಪ್ರದರ್ಶನ
ಪುಷ್ಪ ಪ್ರದರ್ಶನ
ಮಾಡಲು...
ಬೇಕಾಗಿದ್ದಾರೆ....
ಸುಳ್ಳು ಹೇಳಲು
ಕಪ್ಪುಧನ ಹಂಚಲು
ಉಚಿತ ಮಧ್ಯ ನೀಡಲು..
ಮಾಯಾವಿಗಳು...
ಬೇಕಾಗಿದ್ದಾರೆ....
ನನ್ನ ಮುಖಕ್ಕೆ ಬಣ್ಣ
ಪ್ರತಿಸ್ಪರ್ಧಿಗೆ ಸುಣ್ಣ
ಬಿದಿ ಜನರಿಗೆ ಕಣ್
ಸನ್ನೆ ಮಾಡಲು..
ಬೇಕಾಗಿದ್ದಾರೆ...
ಆಸಕ್ತಿ ಉಳ್ಳವರು
ಸಂಪರ್ಕಿಸಿ ಇಂದು
ನಿಮ್ಮೊಣೆಯ
ನಾಯಕರನ್ನು...
@@@@@
- Vamu Gavada
21 Apr 2018, 09:10 pm
Download App from Playstore: