ಅಷ್ಟೇ ಕಣ್ರೀ ಈ ಜನ(ಮತದಾರ)
ಅಷ್ಟೇ ಕಣ್ರೀ ಈ ಜನ
ಎಷ್ಟೇ ಡಂಗೂರ ಸಾರಿದ್ರೂ ಬಿಡಲ್ಲ ಇವರ ಬುದ್ದಿನಾ..
ನೋಟಿನ ಆಸೆಗೆ ಮಾರಿಕೊಳ್ತಾರೆ ಓಟನ್ನ
ಇನ್ನೇಲ್ಲಿ ಉದ್ದಾರ ಆಗುತ್ತೆ ಇವರ ಜೀವನ..
ಯಾರು ಜಾಸ್ತಿ ಕೊಡ್ತಾರೋ ಅವ್ರಿಗೆ ನಮ್ಮ ಓಟು ಅಂತಾರೆ
ಅವನು ನಮ್ಮ ಜಾತಿ ಅವನಿಗೆ ನಮ್ಮ ಸಪೋರ್ಟು ಅಂತಾರೆ..
ಶಿಷ್ಟ ನಾಯಕ ಇವ್ರಿಗೆ ಎಂದೂ ಬೇಕಿಲ್ಲ
ಭ್ರಷ್ಟ ಪಾತಕನಿಗೆ ಗೆಲ್ಲಿಸೋದು ಬಿಡಲ್ಲ..
ಸುಳ್ಳು ಭರವಸೆಗಳಿಗೆ ಜೈಕಾರ ಹಾಕ್ತಾರೆ
ಗುಳ್ಳೆ ನರಿಗಳಿಗೆ ಅಧಿಕಾರ ನೀಡ್ತಾರೆ..
ನೆಚ್ಚಿನ ನಾಯಕನ ವಹಿಸಿಕೊಂಡು ನೂರಾರು ಚರ್ಚೆ ಮಾಡೋದು ಬಿಡಲ್ಲ
ನಾಡಿನ ಸಮಸ್ಯೆಗಳನ್ನ ತಿಳಿದುಕೊಂಡು ಒಂಚೂರು ಯೋಚನೆ ಮಾಡೋದು ಇಲ್ಲ..
- ಸುರೇಶ್ ಟಿ ವಿ
27 Apr 2018, 01:40 pm
Download App from Playstore: