ಇರುಳ ಬಾನಂಗಳದಿ
ಇರುಳ ಬಾನಂಗಳದಿ
ನಗುವ ಚಂದಿರನಿಲ್ಲ!!
ಆ ಚುಕ್ಕಿ ತಾರೆಗಳ
ಹೊಳಪು ಕಂಡಂತಿಲ್ಲ!!
ಕಾರ್ಮೋಡ ಕವಿದಿರಲು
ಬಾನಲ್ಲಿ ಬರಿ ಇರುಳು!!
ನೀನಿಲ್ಲಿ ಬರದಿರಲು
ಬಾಳೆಲ್ಲ ಕರಿ ನೆರಳು!!
ಸುತ್ತಲು ಕತ್ತಲೆ ಇರಲು
ಬೆಳಕನ್ನು ಹಂಬಲಿಸಿ!!
ಹಣತೆ ಹಚ್ಚಲು ಗಾಳಿ
ಬೀಸುತಲೇ ಅದನ್ನ ಅಳಿಸಿ!!
ಈ ಒಂಟಿತನ ಎಂಬ
ಬದುಕಿನಲ್ಲಿ ನನ್ನ ಇರಿಸಿ!!
ನೀ ಹೊರಟೆ ಬಹು ದೂರ
ಯಾವುದೋ ಸುಖ ಅರಸಿ!!
- ಪಿ.ಜಿ.ಜ್ಯೋತಿ
28 Apr 2018, 04:59 pm
Download App from Playstore: