ಹೇಳಲಾಗದ ಹುಚ್ಚು ಮಾತುಗಳು.....

ಈ ನನ್ನ ಪ್ರೀತಿಯೇ ಇಂದು ನಿನಗೆ ಹುಸಿಯಯೆನಿಸಿತೇ ಗೆಳೆಯ ..
ನಾ ಎಷ್ಟೋ ಬಾರಿ ಹೇಳಿದೆ ,ನಾ ನಿನಗೆ ಸರಿಜೋಡಿಯಲ್ಲಯೆಂದು ..
ನೀ ಅದ ಅರಿಯದೆ ಹುಚ್ಚು ಪ್ರೀತಿಯ ನನ್ನೆದೆಯಲ್ಲಿ ಹುಟ್ಟಿಸಿ ಹೆಮ್ಮರವಾಗಿ ಬೆಳೆಯುವಂತೆ ಮಾಡಿ ..

ಇಂದು ನನ್ನ,ನನ್ನಲ್ಲಿ ಹುಟ್ಟಿದ ಪ್ರೀತಿಯ ಬಿಟ್ಟು ಹೋಗುವ ಹುಚ್ಚು ಸಾಹಸ ಏಕೋ ಮಾಡುತಿರುವೆ ,
ತಾಳಲಾಗುತಿಲ್ಲ ಈ ವೇದನೆಯ ,ಸಹಿಸಿದಷ್ಟು ಹೆಚ್ಚು ನೋವು ಕಣ್ಣಿನ ನೀರಿನ ಹಾಗೆ ಹರಿಯಲಾರಂಭಿಸುತ್ತಿದೆ ಗೆಳೆಯಾ..

ಒಮ್ಮೆಯಾದರೂ ಹೇಳು ನಾ ನಿನ್ನ ಎಂದು ಬಿಟ್ಟು ಹೋಗಲಾರೆ ಎಂಬ ಮಾತು ...

ಹೃದಯ ನಿನ್ನೆ ಬೇಕು ಬೇಕು ಎಂದು ಅಂಬಲಿಸುತ್ತಿದೆ , ಹೃದಯದ ಬಡಿತ ಒಮ್ಮೆ ಕೇಳೋ ನನ್ ಗೆಳೆಯ ..

ಯಾವುದೋ ಒಂದು ಕಾರಣಕ್ಕೆ ನನ್ನ ಮುಗ್ದ ಪ್ರೀತಿಯಾ ಬಲಿ ಮಾಡುವುದು ಸರಿಯೇ ನಿನಗೆ .....

ನೀ ದುರಾಗುವ ಮಾತುಗಳು ಆಡಿದಾಗಳೆಲ್ಲ ,ನನ್ನ ಮನಸ್ಥಿತಿಯ ಬಗ್ಗೆ ಒಂದು ಬಾರಿಯಾದರೂ ಯೋಚಿಸೋ ....

ನಿನ್ನ ಬಿಟ್ಟು ನಾ ಇರುವೆಂಬ ಪರಿ ಇದೆಯಾ ನಿನಗೆ ......

ಇದು ನಾ ಏನನ್ನು ಹೇಳಲಾಗದೆ ನರಳಾಡುತಿರುವೆ...

- Acchu love

29 Apr 2018, 02:48 pm
Download App from Playstore: