ತಂಪನೆರೆದು ಬಿಡು...
ನೆನಪುಗಳ ಭಾವ ಬಂಧನದ
ಬಿಸಿಲ ಬೇಗೆಯಲಿ ಹುಟ್ಟುವ
ಬಿಸಿಯುಸಿರಿನ ನೋವಿಗೊಂದಿಷ್ಟು
ನಗುವಿನ ತಂಪನೆರೆದು ಬಿಡು ಚಂದಿರ
ನಿನ್ನಡಿಯಲಿ ಇಡಿಯಾಗಿ
ನಿಂತಿರುವ ಮನ ನಕ್ಕು ಬಿಡಲಿ,
ಹರಿವ ಕಣ್ಣೀರು ಸುಮ್ಮನೆ
ಕಣ್ಣಾಲಿಯಲೆ ಸತ್ತು ಬಿಡಲಿ
ನಗುವ ಕೊಂದು ಹೋದವರ
ನೆನಪುಗಳು ಗೋರಿಗಳಾಗಿಬಿಡಲಿ
ಎದೆಯೊಳಗಿನ ಸದ್ದುಗದ್ದಲಗಳೆಲ್ಲ
ಮನದ ಯಾವ ಮೂಲೆಗೂ ಎಟುಕದಂತಾಗಲಿ
ಅರಳಿ ಬಿಡಲಿ ಅವುಗಳ ಮೇಲೊಂದು
ನಗುವ ಪಡೆದು ನಗುವ ಹರಡಿ
ಕನಸುಗಳ ಮಾಲೆಯಲೆ ಅಲಂಕರಿಸಿದ
ಸಂತಸವೇ ತುಂಬಿದ ಪ್ರೇಮ ಮಂದಿರ
- ಶ್ರೀಕಾವ್ಯ
29 Apr 2018, 09:11 pm
Download App from Playstore: